Wellcome

shreenathmurankan.blogspot.com ಬ್ಲಾಗ್‌ ಗೆ ಸ್ವಾಗತ,,,,

TODAY'S HEADLINES

NEW UPDATES : ........ Date: 10/07/2024 ರಂದು 10ನೇ ತರಗತಿಯ ಮೊದಲ ಅಧ್ಯಾಯದ ವಿಡಿಯೋ ಇಂದು ಅಪಲೋಡ್‌ ಮಾಡಲಾಗಿದೆ. .....

image icons

MY YOUTUBE CHANNEL

Monday, November 9, 2020

ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು - ವರಾಹಮಿಹಿರ

 ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು



ವರಾಹಮಿಹಿರ


        ಗುಪ್ತಕಾಲದ ಸುಪ್ರಸಿದ್ಧ ಜೋತಿಷ್ಯ ವಿದ್ವಾನ್ ವರಾಹಮಿಹಿರನ ಜನನ 499 ರಲ್ಲಿ ಬ್ರಾಹ್ಮಣ ಪರಿವಾರದಲ್ಲಾಯಿತು. ಅವರ ತಂದೆ ಮಗನಿಗೆ ಜೋತಿಷ್ಯ ವಿದ್ಯೆ ಕಲಿಸಿದರು. ನಂತರ ಇವರು ಅಂದಿನ ಮಹಾನ್ ಗಣಿತಜ್ಞ ಆರ್ಯಭಟ್ಟರನ್ನು ಭೆಟ್ಟಿಯಾದಾಗ ಅವರ ವಿದ್ಯೆಗೆ ಪ್ರಭಾವಿತರಾಗಿ ಖಗೋಲ ವಿಜ್ಞಾನ ಹಾಗೂ ಜ್ಯೋತಿಷ್ಯ ವಿಜ್ಞಾನವನ್ನೇ ತಮ್ಮ ಜೀವನದ ಗುರಿಯನ್ನಾಗಿ ಮಾಡಿಕೊಂಡರು.

    ಅವರ ಪ್ರಾರಂಭದ ಹೆಸರು ಮಿಹಿರವೆಂದಿತ್ತು. ಮಿಹಿರವೆಂದರೆ ಸೂರ್ಯ: ಅವರು ಮಿಹಿರನಿಂದ ವಹಾರಮಿಹಿರವಾದದ್ದೂ ಒಂದು ರೋಚಕ ಕಥೆ ಇದ. ಮಿಹಿರನ ವಿದ್ವತ್ತಿಗೆ ಪ್ರಭಾವಿತನಾದ ರಾಜಾ ವಿಕ್ರಮಾದಿತ್ಯನು ತನ್ನ ದರ್ಬಾರದ ಒಂದು ರತ್ನವೆಂದು ಉಳಿಸಿಕೊಂಡರು. ರಾಜರಿಗೆ ಒಂದು ಗಂಡು ಮಗುವಾದಾಗ ಮಿಹಿರನು ಈ ಮಗುವಿನ ಭವಿಷ್ಯ ಹೇಳಿದ ಈ ಮಗು 18 ವರ್ಷದವನಾದಾಗ ಇಂತಹ ದಿನವೇ ಅವನ ಮೃತ್ಯುವಾಗುವದು ಎಂದು,

ರಾಜನಿಗೆ ಮಿಹಿರನ ಮೇಲೆ ಪೂರ್ಣ ವಿಶ್ವಾಸವಿದ್ದಿತ್ತು. ಆದರೂ ರಾಜನು ಮಗನನ್ನು ಒಳ್ಳೆ ಸಂರಕ್ಷಣೆಯಲ್ಲಿಟ್ಟು ನೋಡಿಕೊಳ್ಳತೊಡಗಿದನು. ಅವನನ್ನು ಬದುಕಿಸಲು ಶಕ್ತಿಮೀರಿ ಪ್ರಯತ್ನಿಸಿದನು. ಆದರೇನು 18ನೇ ವರ್ಷದಲ್ಲಿ ಮಿಹಿರ ಹೇಳಿದ ದಿನವೇ ಒಂದು ಕಾಡುಹಂದಿಯು ರಾಜಪುತ್ರನನ್ನು ಕೊಂದು ಹಾಕಿತು. ಇದರಿಂದ ಮಿಹಿರನಿಗೂ ಅತ್ಯಂತ ದುಃಖವಾಯಿತು. ಆದರೂ ಅವನಿಗೆ ಇದೊಂದು ಖಗೋಲ ಜ್ಞಾನದ ಗೆಲುವೆಂದು ತಿಳಿದರು. ರಾಜಾ ವಿಕ್ರಮಾದಿತ್ಯನು ಮಗನ ಸಾವಿನ ನೋವಿನಲ್ಲೂ ಮಿಹಿರನ ಭವಿಷ್ಯ ವಾಣಿಗೆ ಮಾರು ಹೋಗಿ ಅಚ್ಚರಿಪಟ್ಟ, ಮಘದ ರಾಜ್ಯದ ಎಲ್ಲಕ್ಕೂ ಶ್ರೇಷ್ಠ ಪುರಸ್ಕಾರವಾದ ವರಾಹದ ಚಿಹ್ನವನ್ನು ಅರ್ಪಿಸಿದರು. ಅದರಿಂದಾಗಿಯೇ ಅವನು ವರಾಹಮಿಹಿರನೆಂಬ ಹೆಸರಿನಿಂದ ಪ್ರಸಿದ್ಧರಾದನು.

ವರಾಹಮಿಹಿರನು ವೇದಗಳನ್ನು ಬಲ್ಲವನಾಗಿದ್ದನು. ಆದರೆ ಅವನ ಭಾವನೆ ಮತ್ತು ಮನೋವೃತ್ತಿಗಳು ಮಾತ್ರ ವೈಜ್ಞಾನಿಕವಾಗಿದ್ದವು.

ವರಾಹಮಿಹಿರನ ಒಂದು ಪ್ರಸಿದ್ದ ಗ್ರಂಥ 'ಪಾಂಚ ಸಿದ್ಧಾಂತ' ಇದು ಖಗೋಲ ವಿದ್ಯೆ ಹಾಗೂ ಜ್ಯೋತಿಷ್ಯ ವಿದ್ಯೆಗಳಿಗಾಗಿ ಒಂದು ಪ್ರಮಾಣಿತ ಗ್ರಂಥವೆಂದು ಮನ್ನಿಸಲ್ಪಟ್ಟಿದೆ. ಈ ಗ್ರಂಥದಲ್ಲಿ ಅವರು ಖಗೋಲ ವಿದ್ಯೆಗಾಗಿ ಬೇಕಾಗುವ ಅವಶ್ಯಕವಾದ ಮಾಹಿತಿ ನೀಡಿದ್ದಾರೆ.

ವರಾಹಮಿಹಿರನು ಆರ್ಯಭಟ್ಟನಂತೆಯೇ ದೃಷ್ಟಿ ದುಂಡಗಿದೆಯಂದೇ ಹೇಳಿದ. ಯಾವುದೋ ಒಂದು ಶಕ್ತಿಯು ಭೂಮಿಯಲ್ಲಿ ಅಡಗಿದೆಯೆಂದು ಹೇಳುತ್ತಿದ್ದನು. ನಂತರ ಮುಂದೆ ಇದೇ ಶಕ್ತಿಗೆ ಗುರುತ್ವಾಕರ್ಷಣವೆಂದು ಕರೆಯಲಾಯಿತು.

ವರಾಹಮಿಹಿರನ ಗ್ರಂಥದ ಎರಡನೆಯ ಭಾಗ 'ಬೃಹತ್ ಸಂಹಿತಾ'ದಲ್ಲಿ 4000 ಶ್ಲೋಕಗಳಿವೆ, ಅದರಲ್ಲಿ ಅವನು ಕಟಿಬಂಧೀಯ ಭೂ-ದಲವಿಜ್ಞಾನದ ಬಗೆಗೆ ವಿಸ್ತಾರವಾಗಿ ತಿಳಿವಳಿಕೆ ನೀಡಿದ್ದಾನೆ. ಇಂದಿನಿಂದ ಒಂದೂವರೆ ಸಾವಿರ ವರ್ಷ ಹಿಂದಿನ ಭಾರತದ ಸ್ಥಾನ ಪಡೆಯಲು ವರಾಹಮಿಹಿರನ ಗ್ರಂಥವು ಅತ್ಯಂತ ಸಹಾಯಕವಾಗಿದೆ.

ವರಾಹಮಿಹಿರನು ಪರ್ಯಾವರ್ಣ ವಿಜ್ಞಾನ, ಜಲವಿಜ್ಞಾನ ಹಾಗೂ ಗೆದ್ದಲು ಹಾಗೂ ಗಿಡ-ಬಳ್ಳಿಗಳು ಭೂಮಿಯಲ್ಲಿ ಅಡಗಿರುವ ಒಳಗಿನ ನೀರನ್ನು ತೋರಿಸುತ್ತವ ಎಂದು ಹೇಳಿದ್ದಾನೆ. ಇಂದು ವೈಜ್ಞಾನಿಕರುಗಳ ಮುಖಾಂತರ ಈ ಸಂಗತಿಗೆ ಬಹಳ ಮಾನ್ಯತೆ ಸಿಕ್ಕುತ್ತದೆ. ವರಾಹಮಿಹಿರನ ತಂತ್ರಜ್ಞಾನದಿಂದ ನೀರಿನ ಝರಿಯನ್ನು ಸರಳವಾಗಿ ಶೋಧಿಸಬಹುದಾಗಿದೆ. ಖಗೋಲ ವಿಜ್ಞಾನ ಹಾಗೂ ಜ್ಯೋತಿಷ್ಯ ವಿಜ್ಞಾನದ ಜೊತೆಗೆಯೇ ಕೃಷಿ ವಿಜ್ಞಾನ, ಋತುವಿಜ್ಞಾನ, ಋತು ವಿಜ್ಞಾನಗಳ ಬಗ್ಗೆಯೇ ಪೂರ್ಣ ಜ್ಞಾನವಿದ್ದಿತು. ಅವನು ಹಣ್ಣು-ಹೂಗಳ ವೃದ್ಧಿ, ಮಣ್ಣಿನಲ್ಲಿ ಪೌಷ್ಟಿಕತೆ ತುಂಬಲು ಆಹಾರದ ಬಗ್ಗೆಯೇ ಬರೆದಿದ್ದಾನೆ. ಗಿಡ-ಬಳ್ಳಿಗಳ ಸ್ಥಿತಿ ನೋಡಿಯೇ ಬರಗಾಲ ಹಾಗೂ ಮಳೆಯ ಬಗ್ಗೆ ಹೇಳಬಹುದೆಂದು ಅವರು ಅಭಿಪ್ರಾಯಪಟ್ಟಿದ್ದಾನೆ.

No comments:

Post a Comment