Wellcome

shreenathmurankan.blogspot.com ಬ್ಲಾಗ್‌ ಗೆ ಸ್ವಾಗತ,,,,

TODAY'S HEADLINES

NEW UPDATES : ........ Date: 10/07/2024 ರಂದು 10ನೇ ತರಗತಿಯ ಮೊದಲ ಅಧ್ಯಾಯದ ವಿಡಿಯೋ ಇಂದು ಅಪಲೋಡ್‌ ಮಾಡಲಾಗಿದೆ. .....

image icons

MY YOUTUBE CHANNEL

Monday, November 9, 2020

ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು- ಧನ್ವಂತರಿ

 ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು



ಧನ್ವಂತರಿ


ಧನ್ವಂತರೀ ದೇವತೆಗಳ ವೈದ್ಯ ಹಾಗೂ ಆಯುರ್ವೇದ ಶಾಸ್ತ್ರದ ಪ್ರವರ್ತಕ, ದೇವತೆಯು ಪುರಾಣಗಳಲ್ಲಿ ಅವರ ಔಷಧ ಜ್ಞಾನದ ಪ್ರಶಂಸೆ ಮಾಡಲಾಗಿದೆ. ಪೌರಾಣಿಕ ವ್ಯಾಖ್ಯಾನದ ಅನುಸಾರ ಅವರ ಉತ್ಪತ್ತಿಯು ಸಮುದ್ರ ಮಂಥನದ ಸಮಯ ಹೊರಟ 14 ರತ್ನಗಳಲ್ಲಿ ಒಂದಾದ, ಸಮುದ್ರದಿಂದ ಪ್ರಕಟವಾಗುವ ಕಾಲಕ್ಕೆ ಧನ್ವಂತರಿಯ ಕೈಯಲ್ಲಿ ಅಮೃತ ಕುಂಭವಿದ್ದಿತು.

ಧನ್ವಂತರಿಯ ಬಗೆಗೆ ತಿಳಿದ ಪ್ರಕಾರ ಅವರು ದೇವರಾಜ ಇಂದ್ರ ಅಥವಾ | ಭಾರದ್ವಾಜ ಋಷಿಗಳಿಂದ ಆಯುರ್ವೇದದ ಜ್ಞಾನ ಸಂಪಾದಿಸಿದ್ದರು. ಪ್ರತಿವರ್ಷ ದೀಪಾವಳಿಯ ಎರಡು ದಿನಗಳ ಮೊದಲು ಕಾರ್ತಿಕ ಮಾಸದ ತ್ರಯೋದಶಿಯ ದಿನ ಅವರ ಸ್ಮರಣೆಗೆ ಧನ್ವಂತರಿ ದಿವಸವನ್ನು ಒಳ್ಳೆ ವೈಭವದಿಂದ ಆಚರಿಸಲಾಗುವದು. ಸುಶ್ರುತ ಸಂಹಿತೆಯಲ್ಲಿ ಕಾಶೀಪತಿ ದಿವೋದಾಸ ಹಾಗೂ ಧನ್ವಂತರಿ ಹೆಸರು ಬರುತ್ತದೆ , ಆಯುರ್ವೆದ ವಿಜ್ಞಾನಿಯಾದ ಕಾರಣ ಅವರನ್ನು ಧನ್ವಂತರೀ ದಿವೋದಾಸ ಎಂದು ಕರೆಯಲಾಗುವದು. ಅವರು ಸುಶ್ರುತರಿಗೆ ಆಯುರ್ವೇದದ ಉಪದೇಶ ನೀಡಿದರು.

ಧನ್ವಂತರಿಯು ಆಯುರ್ವೇದದ ವಿಷಯದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದರು. ಹಾಗೂ ಅವರ ಪ್ರಚಾರ ಮಾಡಿದರು. ಅಂತೆಯೇ ಅವರನ್ನು ಆಯುರ್ವೇದದ ಪ್ರವರ್ತಕರೆಂದು ತಿಳಿಯಲಾಗುತ್ತದೆ. ಧನ್ವಂತರಿಗೆ ಆರೋಗ್ಯ ಬಂದಿರುವ ಹಾಗೂ ದೀರ್ಘ ಆಯುಷ್ಯ ಪಡೆಯುವ ಜ್ಞಾನವಿದ್ದಿತು. ಹಾಗೆಯೇ ರೋಗ ತಡೆಯುವ, ಉಪಚಾರ ಮಾಡುವ ಜ್ಞಾನವೂ ಇದ್ದಿತು.

ಧನ್ವಂತರಿಯನ್ನು ಕಾಲ್ಪನಿಕ ಈಶ್ವರನೆಂದು ತಿಳಿಯಲಾಗುತ್ತದ. ತಕ್ಕ ಜ್ಞಾನ ಹಾಗೂ ಶಕ್ತಿಯಿಂದ ಅವರು ಸಮಸ್ತ ವಿಶ್ವದ ಸೇವೆ ಮಾಡಿದರು. ಭಾರತೀಯರು ಅವರಿಗೆ ಅತ್ಯಂತ ಉಚ್ಛಸ್ಥಾನ ನೀಡಿದ್ದಾರೆ. ಹಾಗೆಯೇ ಇದೆ ರೂಪದಲ್ಲೇ ಅವರ ಪೂಜೆ ನಡೆದಿದೆ. 

ಧನ್ವಂತರೀ ಶಬ್ದದ ಅರ್ಥ ಶಲ್ಯ ಚಿಕಿತ್ಸೆಯಲ್ಲಿ ಪ್ರವೀಣ, ಸುಶ್ರುತ ಸಂಹಿತೆಯ ಪ್ರಕಾರ ಆಯುರ್ವೇದದ ಎಂಟು ಅಂಗಗಳಲ್ಲಿ ಶಲ್ಯವೇ ಶ್ರೇಷ್ಟ ಧನ್ವಂತರಿಯು ಈ ಎಂಟೂ ಅಂಗಗಳ ಜ್ಞಾನಿಯಾಗಿದ್ದರು. ಅವರು ಚಿಕಿತ್ಸಾ ಕ್ಷೇತ್ರದಲ್ಲಿ ಅನೇಕ ಶೋಧ ಮಾಡಿ ಅದರಲ್ಲಿ ಸಫಲರೂ ಆದರು. ಅವರು ಸ್ವಾಸ್ಥ್ಯದಲ್ಲಿ ರಕ್ಷಕ ಹಾಗೂ ಆಯುರ್ವೇದದ ರಸಾಯನಗಳು ಹಾಗೂ ದ್ರವ್ಯಗಳನ್ನು ಶೋಧಿಸಿದರು. ಅವರು ಎಲ್ಲಕ್ಕೂ ಹೆಚ್ಚಿನ ಶೋಧವೆಂದರೆ ಅಮೃತದ ಪ್ರಯೋಗ ಈ ಪ್ರಕಾರ ಧನ್ವಂತರಿಯು ಜೀವಿಯ ಅಂತಿಮ ಕ್ಷಣವಾದ ಮರಣದ ಮೇಲೂ ವಿಜಯ ಸಾಧಿಸಿದರು.

ಕಾಲಾಂತರದಲ್ಲಿ ಧನ್ವಂತರಿಯ ವೈದ್ಯರೆಂದು ಎಣಿಸಲ್ಪಟ್ಟರು. ಯಾರೇ ಆಗಲಿ ಚಿಕಿತ್ಸೆಯಲ್ಲಿ ನಿಪುಣನಾದರೆ ಅವರಿಗೆ ಧನ್ವಂತರಿಯೆಂದು ಹಾಗೂ ಶಲ್ಯ ಚಿಕಿತ್ಸಕ ಸಂಪ್ರದಾಯ ಅಥವಾ ಶಾಖೆಗೆ ಧನ್ವಂತರಿಯೆಂದು ಕರೆಯಲಾಗುವದು.

No comments:

Post a Comment