Wellcome

shreenathmurankan.blogspot.com ಬ್ಲಾಗ್‌ ಗೆ ಸ್ವಾಗತ,,,,

TODAY'S HEADLINES

NEW UPDATES : ........ Date: 10/07/2024 ರಂದು 10ನೇ ತರಗತಿಯ ಮೊದಲ ಅಧ್ಯಾಯದ ವಿಡಿಯೋ ಇಂದು ಅಪಲೋಡ್‌ ಮಾಡಲಾಗಿದೆ. .....

image icons

MY YOUTUBE CHANNEL

Wednesday, November 4, 2020

10ನೇ ತರಗತಿಯ ವಿದ್ಯಾಗಮ ಸಂವೇದ ವೀಡಿಯೋ ಪಾಠಗಳು

 10ನೇ ತರಗತಿಯ ವಿಜ್ಞಾನ ವಿದ್ಯಾಗಮ ಸಂವೇದ ವೀಡಿಯೋ ಪಾಠಗಳು

 

ಕ್ರ.ಸಂ.

ಅಧ್ಯಾಯದ ಹೆಸರು

Video Link

1

ವಿದ್ಯುಚ್ಛಕ್ತಿ ಭಾಗ-1

ವೀಕ್ಷಿಸಿ

2

ವಿದ್ಯುಚ್ಛಕ್ತಿ ಭಾಗ-2

ವೀಕ್ಷಿಸಿ

3

ವಿದ್ಯುಚ್ಛಕ್ತಿ ಭಾಗ-3

ವೀಕ್ಷಿಸಿ

4

ವಿದ್ಯುಚ್ಛಕ್ತಿ ಭಾಗ-4

ವೀಕ್ಷಿಸಿ

5

ವಿದ್ಯುಚ್ಛಕ್ತಿ ಭಾಗ-5

ವೀಕ್ಷಿಸಿ

6

ಆಮ್ಲಗಳು, ಪ್ರತ್ಯಾಮ್ಲಗಳು & ಲವಣಗಳು ಭಾಗ-1

ವೀಕ್ಷಿಸಿ

7

ಆಮ್ಲಗಳು, ಪ್ರತ್ಯಾಮ್ಲಗಳು & ಲವಣಗಳು ಭಾಗ-2

ವೀಕ್ಷಿಸಿ

8

ಆಮ್ಲಗಳು, ಪ್ರತ್ಯಾಮ್ಲಗಳು & ಲವಣಗಳು ಭಾಗ-3

ವೀಕ್ಷಿಸಿ

9

ಆಮ್ಲಗಳು, ಪ್ರತ್ಯಾಮ್ಲಗಳು & ಲವಣಗಳು ಭಾಗ-4

ವೀಕ್ಷಿಸಿ

10

ಜೀವ ಕ್ರಿಯೆಗಳು ಭಾಗ-1

ವೀಕ್ಷಿಸಿ

11

ಜೀವ ಕ್ರಿಯೆಗಳು ಭಾಗ-2

ವೀಕ್ಷಿಸಿ

12

ಜೀವ ಕ್ರಿಯೆಗಳು ಭಾಗ-3

ವೀಕ್ಷಿಸಿ

13

ಜೀವ ಕ್ರಿಯೆಗಳು ಭಾಗ-4

ವೀಕ್ಷಿಸಿ

14

ಜೀವ ಕ್ರಿಯೆಗಳು ಭಾಗ-5

ವೀಕ್ಷಿಸಿ

15

ವಿದ್ಯುತ್ ಕಾಂತೀಯ ಪರಿಣಾಮಗಳು ಭಾಗ-1

ವೀಕ್ಷಿಸಿ

16

ವಿದ್ಯುತ್ ಕಾಂತೀಯ ಪರಿಣಾಮಗಳು ಭಾಗ-2

ವೀಕ್ಷಿಸಿ

17

ವಿದ್ಯುತ್ ಕಾಂತೀಯ ಪರಿಣಾಮಗಳು ಭಾಗ-3

ವೀಕ್ಷಿಸಿ

18

ವಿದ್ಯುತ್ ಕಾಂತೀಯ ಪರಿಣಾಮಗಳು ಭಾಗ-4

ವೀಕ್ಷಿಸಿ

19

ವಿದ್ಯುತ್ ಕಾಂತೀಯ ಪರಿಣಾಮಗಳು ಭಾಗ-5

ವೀಕ್ಷಿಸಿ

20

ಲೋಹಗಳು ಮತ್ತು ಅಲೋಹಗಳು  ಭಾಗ-1

ವೀಕ್ಷಿಸಿ

21

ಲೋಹಗಳು ಮತ್ತು ಅಲೋಹಗಳು  ಭಾಗ-2

ವೀಕ್ಷಿಸಿ

22

ಲೋಹಗಳು ಮತ್ತು ಅಲೋಹಗಳು  ಭಾಗ-3

ವೀಕ್ಷಿಸಿ

23

ಲೋಹಗಳು ಮತ್ತು ಅಲೋಹಗಳು  ಭಾಗ-4

ವೀಕ್ಷಿಸಿ

24

ನಿಯಂತ್ರಣ ಮತ್ತು ಸಹಭಾಗಿತ್ವ  ಭಾಗ-1

ವೀಕ್ಷಿಸಿ

25

ನಿಯಂತ್ರಣ ಮತ್ತು ಸಹಭಾಗಿತ್ವ  ಭಾಗ-2

ವೀಕ್ಷಿಸಿ

26

ನಿಯಂತ್ರಣ ಮತ್ತು ಸಹಭಾಗಿತ್ವ  ಭಾಗ-3

ವೀಕ್ಷಿಸಿ

27

ನಿಯಂತ್ರಣ ಮತ್ತು ಸಹಭಾಗಿತ್ವ  ಭಾಗ-4

ವೀಕ್ಷಿಸಿ

28

ನಿಯಂತ್ರಣ ಮತ್ತು ಸಹಭಾಗಿತ್ವ  ಭಾಗ-5

ವೀಕ್ಷಿಸಿ

29

ಬೆಳಕು, ಪ್ರತಿಫಲನ & ವಕ್ರೀಭವನ ಭಾಗ-1

ವೀಕ್ಷಿಸಿ

30

ಬೆಳಕು, ಪ್ರತಿಫಲನ & ವಕ್ರೀಭವನ ಭಾಗ-2

ವೀಕ್ಷಿಸಿ

31

ಬೆಳಕು, ಪ್ರತಿಫಲನ & ವಕ್ರೀಭವನ ಭಾಗ-3

ವೀಕ್ಷಿಸಿ

32

ಬೆಳಕು, ಪ್ರತಿಫಲನ & ವಕ್ರೀಭವನ ಭಾಗ-4

ವೀಕ್ಷಿಸಿ

33

ಬೆಳಕು, ಪ್ರತಿಫಲನ & ವಕ್ರೀಭವನ ಭಾಗ-5

ವೀಕ್ಷಿಸಿ

34

ಕಾರ್ಬನ್ & ಅದರ ಸಂಯುಕ್ತಗಳು ಭಾಗ-1

ವೀಕ್ಷಿಸಿ

35

ಕಾರ್ಬನ್ & ಅದರ ಸಂಯುಕ್ತಗಳು ಭಾಗ-2

ವೀಕ್ಷಿಸಿ

ಪಠ್ಯಪುಸ್ತಕದಲ್ಲಿರುವ ಕ್ಯೂ.ಆರ್.‌ ಕೋಡ್‌ ಗಳ ಬಳಕೆ ಏಕೆ? ಮತ್ತು ಹೇಗೆ?


                    ಈ ಕೆಳಗಿನ ಕ್ಯೂ.ಆರ್.‌ ಕೋಡ್‌ ನ್ನು ಒತ್ತಿರಿ



ಅಥವಾ 
ಕೆಳಗಿನ ಲಿಂಕ್‌ ಒತ್ತಿರಿ

ನಮ್ಮ ಹೆಮ್ಮೆಯ ಕನ್ನಡತಿ – ಶಕುಂತಲ ದೇವಿ (ಮಾನವ ಕಂಪ್ಯೂಟರ್)

 ‌                  ನಮ್ಮ ಹೆಮ್ಮೆಯ ಕನ್ನಡತಿ – ಶಕುಂತಲ ದೇವಿ 




ಇವರ ಬಗ್ಗೆ  ನಮಗೆಷ್ಟು ಗೊತ್ತು? 

    ಮಾನವ ಕಂಪ್ಯೂಟರ್ ಎಂದೇ ಲೋಕವಿಖ್ಯಾತ ರಾಗಿದ್ದ ಶಕುಂತಲಾ ದೇವಿ ಅವರ ಜನ್ಮದಿನವಿಂದು. ಇಂದು ಅವರು ನಮ್ಮೊಂದಿಗಿಲ್ಲ ಅದರೆ ಅವರ ದೈತ್ಯಪ್ರತಿಭೆ ಮತ್ತು ಎಂಥಹ ಕ್ಲಿಷ್ಠ ಸಮಸ್ಯೆಯನ್ನು ಎದುರಿಸುವ ಸಾಮಥ್ರ್ಯ ವನ್ನು ಮತ್ತೊಬ್ಬರಲ್ಲಿ ನಿರೀಕ್ಷಿಸಲೂ ಸಾಧ್ಯವಿಲ್ಲ. ಅದೊಂದು ಅನನ್ಯ ಪ್ರತಿಭೆ, ಅದರಲ್ಲೂ ನಮ್ಮ ರಾಜ್ಯದ ಕನ್ನಡಿಗರು ಶಕುಂತಲಾ ದೇವಿ ಎಂಬುದು ಹೆಮ್ಮೆಯ ಸಂಗತಿ. 

    ಇತ್ತೀಚಿನ ತಲೆಮಾರಿನಲ್ಲಿ ಬಹುತೇಕರಿಗೆ ಮಾನವ ಕಂಪ್ಯೂಟರ್ ಶಕುಂತಲಾ ದೇವಿಯವರ ಕುರಿತು ತಿಳಿದಿರಲಾರದು. ಕಳೆದ ಒಂದು ದಶಕಗಳ ಹಿಂದಿನ ವರೆಗೂ ಖ್ಯಾತಿಯ ಉತ್ತುಂಗದಲ್ಲಿದ್ದ ಶಕುಂತಲಾದೇವಿ ವಿಶ್ವ ಪರ್ಯಟನೆಯ ನಂತರ ಇಳಿ ವಯಸ್ಸಿಗೆ ಬೆಂಗಳೂರಿನಲ್ಲೇ ನೆಲೆಸಿದ್ದರು. ಹಾಗೂ ಜ್ಯೋತಿಷ್ಯ ಹೇಳುತ್ತಾ ದಿನ ದೂಡುತ್ತಿದ್ದರು. ಜನ್ಮ ದಿನಾಂಕ, ಸಮಯ ಮತ್ತು ಸ್ಥಳದ ಮಾಹಿತಿಯನ್ನಾದರಿಸಿ ಲೆಕ್ಕ ಹಾಕಿ ಜ್ಯೋತಿಷ್ಯ ಹೇಳುವುದರಲ್ಲಿ ಶಕುಂತಲಾ ದೇವಿ ಸಿದ್ದಹಸ್ತರಾಗಿದ್ದರು.

ಇದೆಲ್ಲಕ್ಕಿಂತ ಶಕುಂತಲಾ ದೇವಿ ಬಾಲ್ಯದಲ್ಲೇ ತೋರಿದ ಅಸಾಧಾರಣ ಪ್ರತಿಭೆ ಅವರನ್ನು ಜಗತ್ತಿಗೆ ಬಹುಬೇಗ ಪರಿಚಯವಾಗುವಂತೆ ಮಾಡಿದ ಕಥಾನಕ ಮಾತ್ರ ಸಿನಿಮಾ ಕಥೆಗಿಂತಲೂ ರೋಚಕವಾದ್ದೇ ಆಗಿದೆ.ಬ್ರಾಹ್ಮಣ ಕುಟುಂಬದ ಶಕುಂತಲಾ ದೇವಿ ಜನಿಸಿದ್ದು 4, ನವೆಂಬರ್ 1929 ರಂದು ಬೆಂಗಳೂರಿನಲ್ಲಿ. ತಂದೆ ಮತ್ತು ತಾಯಿಯ ಕುರಿತು ಖಚಿತವಾದ ಮಾಹಿತಿಗಳು ಲಭ್ಯವಿಲ್ಲ ಆದರೆ ಶಕುಂತಲ ದೇವಿ 3ವರ್ಷದ ಮಗುವಾಗಿದ್ದಾಗಲೇ ಅವರ ತಂದೆ ಪುರೋಹಿತ ವರ್ಗದ ಅರ್ಚಕ ವೃತ್ತಿಯನ್ನು ಮಾಡಲು ಒಪ್ಪದೇ ಹೊಟ್ಟೆಪಾಡಿಗಾಗಿ ಸರ್ಕಸ್ ಸೇರಿಬಿಟ್ಟಿದ್ದರು. ಆ ವೇಳೆಗೆ ಶಕುಂತಲಾ ದೇವಿಯವರ ತಾಯಿಯೂ ಇದ್ದರೆ ಎಂಬುದು ತಿಳಿದಿಲ್ಲ. ಶಕುಂತಲಾ ದೇವಿಯ ತಂದೆ ಸರ್ಕಸ್ ನಲ್ಲಿ ಹಗ್ಗದ ಮೇಲೆ ಕೋಲನ್ನು ಹಿಡಿದು ಬ್ಯಾಲೆನ್ಸ್ ಮಾಡುತ್ತಾ ನಡೆಯುವ ಆಟ ಪ್ರದರ್ಶಿಸುತ್ತಿದ್ದರು. ಇದೆ ಸಂಧರ್ಭದಲ್ಲಿ ಕಾರ್ಡ ಟ್ರಿಕ್ ಮಾಡುತ್ತಿದ್ದ ತಂದೆಗೆ ಸಹಾಯಕಿಯಾಗಿ 3ವರ್ಷದ ಶಕುಂತಲಾ ಸಹಕರಿಸುತ್ತಿತ್ತು.ಒಂದು ದಿನ ತಂದೆಯೊಂದಿಗೆ ಸರ್ಕಸ್ ನಿಂದ ಹೊರಬಿದ್ದ ಬಾಲೆ ಶಕುಂತಲಾ ರಸ್ತೆ ಬದಿಯ ಪ್ರದರ್ಶನಗಳಲ್ಲು ತನ್ನ ಅಗಾಧ ಬುದ್ದಿ ಮತ್ತೆ ಪ್ರದರ್ಶಿಸಿ ಪ್ರೇಕ್ಷಕÀ ವರ್ಗದ ಗಮನ ಸೆಳೆಯುತ್ತಿದ್ದಳು. ಸರಿ ಸುಮಾರು 6ನೇ ವಯಸ್ಸಿಗೆ ಬುದ್ದಿ ಮತ್ತೆ ಪ್ರದರ್ಶನ, ನೆನಪಿನ ಶಕ್ತಿ ಪ್ರದರ್ಶನ ಹಾಗೂ ಕಠಿಣ ಲೆಕ್ಕಾಚಾರಗಳನ್ನು ಚಾಕಚಕ್ಯತೆಯಿಂದ ಕ್ಷಣ ಮಾತ್ರದಲ್ಲಿ ಪರಿಹರಿಸಿ ಉತ್ತರಿಸುತ್ತಿದ್ದ ಇದೆಲ್ಲವನ್ನು ಜ್ಞಾನ ಗಂಗೋತ್ರಿಯಂತಿದ್ದ ಮೈಸೂರು ವಿವಿ ಮುಂದೆ ಪ್ರದರ್ಶಿಸಿ ಗಮನ ಸೆಳೆದರು. ಮುಂದೆ 8ನೇ ವಯಸ್ಸಿನಲ್ಲಿ ಚೆನ್ನೈಗೆ ಹೋದ ಶಕುಂತಲಾ ದೇವಿ ಅಲ್ಲಿಯ ಪ್ರಸಿದ್ದ ಅಣ್ಣಾ ಮಲೈ ವಿವಿ ಯ ಎದುರು ಇಂತಹದ್ದೇ ಪ್ರದರ್ಶನ ನೀಡಿ ಸೈಎನಿಸಿಕೊಂಡರಲಲ್ಲದೇ ಪ್ರವರ್ದಮಾನಕ್ಕೆ ಬಂದರು.

        ಹೀಗೆ ಶಾಲೆಯನ್ನೇ ಕಲಿಯದೇ ಬುದ್ದಿಮತ್ತೆಯನ್ನು ಲೆಕ್ಕಾಚಾರದ ಚತುರತೆಯನ್ನು ರೂಢಿಸಿಕೊಂಡಿದ್ದ ಶಕುಂತಲಾದೇವಿ ಗಣಿತದ ಎಲ್ಲಾ ಕಠಿಣ ಸಮಸ್ಯೆಗಳನ್ನು ಬಗೆಹರಿಸುತ್ತಾ ಹೋದರು. ಎಲ್ಲವೂ ನೀರು ಕುಡಿದಂತೆ ಪರಿಹಾರವಾಗುತ್ತಿದ್ದುದನ್ನು ಕಂಡ ಜಗತ್ತು ಶಕುಂತಲಾ ದೇವಿಯ ಸ್ಮರಣೆ ಮತ್ತು ಚತುರತೆಗೆ ಮಾರು ಹೋಯಿತು. ಭಾರತೀಯ ಗಣಿತ ತಜ್ಞೆ ಎಂದು ಹೆಸರಾದ ಅವರು 1977ರಲ್ಲಿ 201ರ ವರೆಗಿನ ಅಂಕಿಗಳ 23ನೇ ವರ್ಗಮೂಲವನ್ನು ಕೇವಲ 50ಸೆಕೆಂಡುಗಳಲ್ಲಿ ಲೆಕ್ಕ ಹಾಕಿ ಹೇಳಿ ಜಗತ್ತನ್ನೆ ಚಿಕಿತಗೊಳಿಸಿದರು. ಆ ಲೆಕ್ಕ ಹೀಗಿದೆ.

916748676920039158098660927585380162483106680144308622407126516427934657040867096593279205767480806790022783016354924852380335745316935111903596577547340075681688305 620821016129132845564805780158806771=546372891

ಈ ಲೆಕ್ಕದ ಉತ್ತರವನ್ನು ಶಕುಂತಲಾದೇವಿ ಕೇವಲ 50ಸೆಕೆಂಡುಗಳಲ್ಲಿ ಲೆಕ್ಕ ಹಾಕಿ ಹೇಳಿದರೆ ಅಂದು ಬಳಕೆಯಲ್ಲಿದ್ದ ಕಂಪ್ಯೂಟರ್ ಈ ಉತ್ತರ ನೀಡಲು ತೆಗೆದುಕೊಂಡ ಸಮಯ ಬರೋಬ್ಬರಿ 62ಸೆಕೆಂಡುಗಳು! ಅದೇ ರೀತಿ 1980ರಲ್ಲಿ ಲಂಡನ್ನಿನಲ್ಲಿ 13ಅಂಕಿಗಳಿದ್ದ ಸಂಖ್ಯೆಯ ಲೆಕ್ಕ(7,686,369,774,870 x 2,465,099,745,779=18,947,668,177,995,426,462,773,730 )ಗೆ ಉತ್ತರಿಸಲು ತೆಗೆದುಕೊಂಡ ಅವಧಿ ಕೇವಲ 28ಸೆಕೆಂಡುಗಳು. ಇದು 1995ರ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ ನಲ್ಲಿ ನಮೂದಾಗಿದೆ. ಹೀಗೆ ಸಾವಿರಾರು ದಾಖಲೆಗಳನ್ನು ಸಾವಿರಾರು ಪ್ರದರ್ಶನಗಳನ್ನು ನೀಡಿರುವ ಶಕುಂತಲಾ ದೇವಿ ಜಗದ್ವಿಖ್ಯಾತ ರಾಗಿದ್ದಾರೆ. ಮಾನವನ ಮೆದುಳಿನ ಶಕ್ತಿಗೆ ಒಂದುಸೀಮಿತ ವ್ಯಾಪ್ತಿಯಿದೆ, ಅದನ್ನು ಮೀರಿದರೆ ಸ್ಥಿಮಿತ ತಪ್ಪುವ ಸಾಧ್ಯತೆಗಳೆ ಹೆಚ್ಚು ಆದರೆ ಕಂಪ್ಯೂಟರ್ ಗಳು ನಿರೀಕ್ಷಿಸದ ವೇಗದಲ್ಲಿ ಮಾಹಿತಿಯನ್ನು ಪಡೆಯುವ ಮತ್ತು ನಿಖರವಾಗಿ ಉತ್ತರಿಸುವ ಅಭೂತ ಪೂರ್ವ ಶಕ್ತಿಯನ್ನು ಹೊಂದಿವೆ. ಅಂತಹ ಕಂಪ್ಯೂಟರ್ ಗಳಿಗೆ ಸವಾಲಾಗಿ ನಿಂತವರು ನಮ್ಮ ಶಕುಂತಲಾ ದೇವಿ.

ವಿದ್ಯಾರ್ಥಿ ಯುವ ಜನರಿಗೆ ಹಿಂದೆಲ್ಲಾ ಹಿರಿಯರು ಮಾನವ ಕಂಪ್ಯೂಟರ್ ಶಕುಂತಲಾದೇವಿಯನ್ನು ಉದಾಹರಿಸಿ ಅವರಂತಾಗಬೇಕು ನೆನಪಿನ ಶಕ್ತಿ ಇರಬೇಕು ಎಂದು ಉದಾಹರಿಸುತ್ತಿದ್ದರು. ಅಷ್ಟರಮಟ್ಟಿಗೆ ತನ್ನ ಛಾಪನ್ನು ಮೂಡಿಸಿದ್ದ ಶಕುಂತಲಾ ದೇವಿ ದೇಶ ವಿದೇಶಗಳನ್ನು ಸುತ್ತಿ ಎಲ್ಲೆಡೆಯೂ ಎಲ್ಲರಿಂದಲೂ ಸೈ ಎನಿಸಿಕೊಂಡು ಮಾನವ ನಿರ್ಮಿತ ಕಂಪ್ಯೂಟರ್ ಗೆ ಪರ್ಯಾಯ ವೆನಿಸಿಬಿಟ್ಟರು. ಈ ದಿಸೆಯಲ್ಲಿ ಶಕುಂತಲಾ ದೇವಿ ಸಾವಿರಾರು ಪುಸ್ತಕಗಳನ್ನು ಬರೆದಿದ್ದಾರೆ. ಆ ಮೂಲಕ ಜ್ಞಾನದ ಹರಿವನ್ನು ವಿಸ್ತರಿಸಿದ್ದಾರೆ, ಯುವ ಜನರಿಗೆ ಮಾದರಿಯಾಗಿದ್ದಾರೆ. ಇತ್ತೀಚೆಗೆ 2006ರಲ್ಲಿ ಇನ್ ಎ ವಂಡರ್ ಲ್ಯಾಂಡ್ ಆಫ್ ನಂಬರ್ಸ್ ವಿತ್ ಓರಿಯಂಟ್ ಪೇಪರ್ ಬ್ಯಾಕ್ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ್ದರು. ಸ್ಮರಣೆ ಶಕ್ತಿಯ ವೃದ್ದಿಗೆ ಪೂರಕವಾದ ವಿವಿಧ ಆಯಾಮಗಳ ಕುರಿತು ಸ್ಪಷ್ಟ ಪರಿಕಲ್ಪನೆ ಹೊಂದಿದ ಶಕುಂತಲಾ ದೇವಿ ಆ ಹಾದಿಯಲ್ಲಿ ಇನ್ನು ಸಾಧಿಸುವ ಹಾದಿಯಲಿದ್ದರು. 84ರ ಇಳಿ ವಯಸ್ಸಿನಲ್ಲಿ ಹೃದಯಾಘಾತದಿಂದ 21ಏಪ್ರಿಲ್ 2013ರಂದು ಕಾಲನ ವಶವಾದರು.

ಇಂತಹ ಆದಮ್ಯ ಪ್ರತಿಭೆಗಳು ನಮ್ಮ ನಡುವೆಯೇ ಇವೆ ಆದರೆ ಅವನ್ನು ಬೆಳಕಿಗೆ ತರುವ ಒಳಗಣ್ಣು ನಮ್ಮೊಳಗಿರಬೇಕು ಆ ಮೂಲಕ ಸಾರ್ವತ್ರಿಕವಾಗಿ ನಮ್ಮನ್ನು ನಾವು ತೆರೆದುಕೊಳ್ಳಲು ಸಾಧ್ಯ, ಸಾಮಥ್ರ್ಯ ಎಂಬುದು ಅವಕಾಶಗಳನ್ನು ಕಾಲ ಬುಡಕ್ಕೆ ತಂದು ಹಾಕುತ್ತದೆ ಎಂಬುದಕ್ಕೆ ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಸಾಕ್ಷಿ ಪ್ರಜ್ಞೆ ಆಗಿದ್ದಾರಲ್ಲವೇ?

ಇವರು ಕನ್ನಡಿಗರು ಎಂದು ಹೇಳಲು ನಿಜವಾಗಲು ತುಂಬ ತುಂಬ ಹೆಮ್ಮೆಯೆನಿಸುತ್ತದೆ!!

Monday, November 2, 2020

ಆಮ್ಲಗಳು, ಪ್ರತ್ಯಾಮ್ಲಗಳು & ಲವಣಗಳುಗಳು Quiz


                 ಈ ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿರಿ ಮತ್ತು ಉತ್ತರಿಸಿ

9th Std Videos

                                      ಕೆಳಗಿನ ಆಯಾ ಅಧ್ಯಾಯದ        ಮೇಲೆ ಕ್ಲಿಕ್ ಮಾಡಿ  ಅಧ್ಯಾಯದ PPT ಯನ್ನು ಡೌನ್ಲೋಡ್ ಮಾಡಿಕೊಳ್ಳಿ

 

ಕ್ರ.ಸಂ.

ಅಧ್ಯಾಯದ ಹೆಸರು

Link

1

ನಮ್ಮ ಸುತ್ತಲಿನ ದ್ರವ್ಯಗಳು   NEW

Download

2

ನಮ್ಮ ಸುತ್ತಲಿನ ದ್ರವ್ಯಗಳು ಶುದ್ದವೇ

Download

3

ಪರಮಾಣುಗಳು ಮತ್ತು ಅಣುಗಳು  NEW

Download

4

ಪರಮಾಣುವಿನ ರಚನೆ

Download

5

ಜೀವದ ಮೂಲ ಘಟಕ

Download

6

ಅಂಗಾಂಶಗಳು

Download

7

ಜೀವಿಗಳಲ್ಲಿ ವೈವಿಧ್ಯತೆ

Download

8

ಚಲನೆ

Download

9

ಬಲ ಮತ್ತು ಚಲನೆಯ ನಿಯಮಗಳು

Download

10

ಗುರುತ್ವ

Download

11

ಕೆಲಸ ಮತ್ತು ಶಕ್ತಿ

Download

12

ಶಬ್ದ

Download

13

ನಾವೇಕೆ ಕಾಯಿಲೆ ಬೀಳುತ್ತೇವೆ

Download

14

ನೈಸರ್ಗಿಕ ಸಂಪನ್ಮೂಲಗಳು

Download

ಪರೀಕ್ಷಾವಾಣಿ

 

ಪರೀಕ್ಷಾವಾಣಿ - S S L C ಪುನರ್ಮನನ 

ಈ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ನೀವು ವಿಡಿಯೋ ಪಾಠಗಳನ್ನು ವೀಕ್ಷಿಸಬಹುದು

MODEL KEY ANSWERS (SSLC)

 

MODEL KEY ANSWERS

 ****ಎಸ್.ಎಸ್.ಎಲ್.ಸಿ ಪರೀಕ್ಷೆಯ ಮಾದರಿ ಉತ್ತರಪತ್ರಿಕೆಗಳಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.**

ಮಾರ್ಚ-2018-19ನೇ ಸಾಲಿನ ಕೀ ಉತ್ತರಗಳು***

*****ಭೌತಶಾಸ್ತ್ರ -----------DOWNLOAD

*****ರಸಾಯನಶಾಸ್ತ್ರ-----DOWNLOAD

******* ಜೀವಶಾಸ್ತ್ರ ---------DOWNLOAD


ಜೂನ್‌ 2018-19 ನೇ ಸಾಲಿನ ಕೀ ಉತ್ತರಗಳು***

*****ಭೌತಶಾಸ್ತ್ರ -----------DOWNLOAD

*****ರಸಾಯನಶಾಸ್ತ್ರ-----DOWNLOAD

******* ಜೀವಶಾಸ್ತ್ರ ---------DOWNLOAD


ಜೂನ್‌ 2019-20 ನೇ ಸಾಲಿನ ಕೀ ಉತ್ತರಗಳು***

*****ಭೌತಶಾಸ್ತ್ರ -----------DOWNLOAD

*****ರಸಾಯನಶಾಸ್ತ್ರ-----DOWNLOAD

******* ಜೀವಶಾಸ್ತ್ರ ---------DOWNLOAD


**ಸೆಪ್ಟೆಂಬರ್ 2020 ರ ಕೀ ಉತ್ತರಗಳು

***ಭೌತಶಾಸ್ತ್ರ -----------------DOWNLOAD

***ರಸಾಯನಶಾಸ್ತ್ರ-------------DOWNLOAD

***ಜೀವಶಾಸ್ತ್ರ -------------------DOWNLOAD

Sunday, November 1, 2020

ಸೇತುಬಂಧ (Bridge Course) VIDEOS

 

ಸೇತುಬಂಧ (Bridge Course)


**ಸೇತುಬಂಧ( Bridge Course) ವಿಡಿಯೋ ಪಾಠಗಳು**

ಕೋವಿಡ್-19 - ಕೊರೋನಾ ವೈರಸ್ ಸೃಷ್ಟಿಸಿದ ಹಾನಿಕಾರಕ ಪರಿಣಾಮದಿಂದಾಗಿ, ಮಕ್ಕಳ ಆರೋಗ್ಯ ದ ರಕ್ಷಣೆ ಕಾರಣಕ್ಕೆ ಶಾಲೆ ಜೂನ್ - ಜುಲೈ  ನಲ್ಲಿ  ಪ್ರಾರಂಭವಾಗಲಿಲ್ಲ.ಹೀಗಾಗಿ ಕರ್ನಾಟಕ ಸರ್ಕಾರ ಮಕ್ಕಳ ನಿರಂತರ ಕಲಿಕೆಗಾಗಿ ಹಲವು ಉಪಕ್ರಮ ಜಾರಿಗೊಳಿಸಿತು.ಅದರಲ್ಲಿ ಸೇತುಬಂಧ ಕಾರ್ಯಕ್ರಮವೂ ಒಂದು. ಇಲ್ಲಿ ಮುಂಚೆಯೇ ಮುದ್ರಿತವಾದ ವಿಡಿಯೋ ಪಾಠ ಗಳನ್ನು  ಚಂದನವಾಹಿನಿಯ ಮೂಲಕ ಮನೆಮನೆಗೆ ತಲುಪಿಸುವ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ ಪ್ರಸಾರವಾದ 8,9 ಮತ್ತು 10 ನೇ ತರಗತಿಯ ವಿಜ್ಞಾನ ವಿಷಯದ ವಿಡಿಯೋ ಗಳ ಲಿಂಕ್ ಗಳು ಇಲ್ಲಿವೆ.ಇದನ್ನು ಸಂಗ್ರಹಿಸಿದ ಶಿಕ್ಷಕರಿಗೆ ಧನ್ಯವಾದ ಸಲ್ಲಿಸುತ್ತಾ ಇದು ತಮಗೆ ಸಹಾಯಕವಾಗಲಿ ಎಂದು ಆಶಿಸುತ್ತೇನೆ.

YouTube ಲಿಂಕ್ ಮೇಲೆ ಕ್ಲಿಕ್ ಮಾಡಿ ಪಾಠ ವೀಕ್ಷಿಸಬಹುದು.


1.SSLC ಸೇತುಬಂಧ ಕಾರ್ಯಕ್ರಮದ ವಿಡಿಯೋ ಲಿಂಕ್ಗಳು

         ***** DOWNLOAD DAY 1 VIDEO*****


          **** DOWNLOAD DAY 2 VIDEO****"*


       *****DOWNLOAD DAY 5 VIDEO*****


         *****DOWNLOAD DAY 6 VIDEO*****


        *****DOWNLOAD DAY 7 VIDEO*****


        *****DOWNLOAD DAY 10 VIDEO****


        *****DOWNLOAD DAY 11 VIDEO****


        *****DOWNLOAD DAY 12 VIDEO****


        *****DOWNLOAD DAY 15 VIDEO****


        *****DOWNLOAD DAY 16 VIDEO****


        *****DOWNLOAD DAY 17 VIDEO****

       

         *****DOWNLOAD DAY 20 VIDEO****





9 ನೇ ತರಗತಿ ಸೇತುಬಂಧ  ಕಾರ್ಯಕ್ರಮದ ವಿಡಿಯೋ ಲಿಂಕ್ ಗಳು

---- DOWNLOAD DAY 3 VIDEO


----DOWNLOAD DAY 4 VIDEO


-----DOWNLOAD DAY 19 VIDEO


-----DOWNLOAD DAY 14 VIDEO


-----DOWNLOAD DAY 13 VIDEO


-----DOWLOAD DAY 18 VIDEO


-----DOWNLOAD DAY 9 VIDEO


----DOWNLOAD DAY 8 VIDEO

ಶಿಕ್ಷಣ ಕ್ಷೇತ್ರದಲ್ಲಿ ಜನಪ್ರಿಯವಾದ ಮೊಬೈಲ್ APPಗಳು

 ಶಿಕ್ಷಣ ಕ್ಷೇತ್ರದಲ್ಲಿ ಜನಪ್ರಿಯವಾದ ಮೊಬೈಲ್ APPಗಳು


            ಇದು ಡಿಜಿಟಲ್ ಯುಗ ನಮ್ಮ ಎಲ್ಲ ಸಂವೇದನಾ ಶಕ್ತಿಯು ಟೆಕ್ನಾಲಜಿಯ ಮೇಲೆ ಅವಲಂಭಿತವಾಗಿದೆ. ಮೆಸೇಜಿಂಗ್, ಚಾಟಿಂಗ್ , ಗೇಮಿಂಗ್ ನಿಂದ ಹಿಡಿದು ದೊಡ್ಡ ದೊಡ್ಡ ಮಟ್ಟದ ತಾಂತ್ರಿಕ ಸಂಶೋಧನೆ , ಕಾರ್ಯಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಹಭಾಗಿತ್ವ ಟೆಕ್ನಾಲಜಿಯದ್ದಾಗಿದೆ.ಟೆಕ್ನಾಲಜಿ ಯಿಲ್ಲದ ಬದುಕನ್ನು ಇಂದು ಮಾನವ ಕ್ಷಣದ ಮಟ್ಟಿಗೂ ಊಹಿಸಲಾರ. ದಿನ ನಿತ್ಯವೂ ಹೊಸ ಅವಿಷ್ಕಾರದೊಂದಿಗೆ ನೂತನ ತಂತ್ರಾಂಶಗಳನ್ನು ಕಂಡು ಹಿಡಿದು ತನ್ನ ಕಾರ್ಯಕ್ಷಮತೆಯನ್ನು ಅಲ್ಪ ಸಮಯದಲ್ಲಿ ವಿಶಾಲವಾಗಿ ಪ್ರಕಟಿಸುತ್ತ ಅವಿನಾಭಾವ ಸಾಧನೆ ಮಾಡುತ್ತಿರುವ ಮಾನವ ಮಿದುಳಿಗೆ ಎಷ್ಟು ಸಲಾಂ ಹೇಳಿದರೂ ಸಾಲದು.ಇಂದು ಸ್ಮಾರ್ಟ್ ಪೋನ್ ಎಂಬ ಸಣ್ಣ ವಸ್ತುವಿನಲ್ಲಿ ಇಡೀ ಜಗತ್ತಿನ ಎಲ್ಲ ವಿಚಾರಗಳನ್ನು ಬಚ್ಚಿಟ್ಟುಕೊಳ್ಳ ಬಹುದು . ಹೆಬ್ಬೆರಳಿನ ತುತ್ತ ತುದಿಯಿಂದ ಟ್ಯಾಪ್ ಮಾಡುವ ಮೂಲಕ ಊಹೆಗೂ ನಿಲುಕದ ಹೊಸ ವಿಶ್ವವನ್ನೇ ನಾವು ಕಾಣಬಹುದು.

ಟೆಕ್ನಿಕಲ್ ಆಗಿ ಹೇಳಿದರೆ "ಇದು ಸ್ಮಾರ್ಟ್ ಜನರ ಸ್ಮಾರ್ಟ್ ಯುಗ" . ವಿದ್ಯಾರ್ಥಿಯಿಂದ ಹಿಡಿದು ಮುಪ್ಪಿನ ದಿನಗಳನ್ನು ಕಳೆಯುವ ವೃದ್ಧರು ಸಹ ತಮ್ಮ ದೈನಂದಿನ ಜೀವನಕ್ಕೆ ಸ್ಮಾರ್ಟ್ ಮೆರಗು ನೀಡಲು ದಿನ ನಿತ್ಯವೂ ಕಸರತ್ತು ಮಾಡುತ್ತಾರೆ .ಸಾಮಾನ್ಯವಾಗಿ ಹಿರಿಯರು "ನಿಮ್ಮ ಮನೆಯಲ್ಲಿ ಫೋನ್ ಇದೆಯಾ ?" ಎಂಬ ಪ್ರಶ್ನೆ ಕೇಳುತಿದ್ದ ಕಾಲ ಒಂದಿತ್ತು . ಆದರೆ ಇಂದು ಕಿರಿಯರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಶೈಲಿಯಲ್ಲಿ ಸ್ಟೈಲ್ ಆಗಿ"ನಿನ್ ಹತ್ರಾ ವಾಟ್ಸ್ ಅಪ್ ಇದೆಯಾ ?ಎಂಬ ಪ್ರಶ್ನೆ ಕೇಳುವ ಕಾಲ ಬಂದಿದೆ.ನಿಜಕ್ಕೂ ಟೆಕ್ನಾ ಲಾಜಿ ನಮ್ಮ ಬದುಕಿನ ರೂಪು ರೆಷೆಯನ್ನು ಬದಲಿಸುತ್ತಾ ದೈನಂದಿನ ಜೀವನಕ್ಕೆ ಹೊಸ ಆಯಾಮ ನೀಡುತ್ತಿದೆ ಎಂದರೆ ತಪ್ಪಾಗಲಾರದು . 

ಅದೇ ರೀತಿ ಸ್ಮಾರ್ಟ್ ಫೋನ್ ಗಳಲ್ಲಿ APP ಗಳ ಬಳಕೆಕೂಡ.APP ಅಥವಾ ಅಪ್ಲಿಕೆಶನ್ ನಲ್ಲಿ ಹಲವು ವಿಧ ಗಳಿವೆ. ಪ್ರಸ್ತುತ ಅಂಕಣದಲ್ಲಿ ನಾವು ಶಿಕ್ಷಣಕ್ಕೆ ಸಮಬಂಧ ಪಟ್ಟ APP ಗಳ ಬಗ್ಗೆ ಚರ್ಚಿಸುತ್ತಿದ್ದೇವೆ.ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಮತ್ತು ಹೆಚ್ಚು ಜನಪ್ರಿಯವಾದ ಕೆಲವು ಮೊಬೈಲ್ APP ಗಳ ಬಗ್ಗೆ ಇಲ್ಲಿ ಸರಳವಾಗಿ ತಿಳಿಸುವ ಪ್ರಯತ್ನ ಮಾಡಿದ್ದೇವೆ.ಇಲ್ಲಿರುವ APP ಗಳ ಬಗ್ಗೆ ಓದಿ ಅರಿತು ಕೊಳ್ಳಿ ಹಾಗೆ ಆತ್ಮೀಯರೊಂದಿಗೆ ಶೇರ್ ಮಾಡಿ.

1. Dropbox(ಡ್ರಾಪ್ ಬಾಕ್ಸ್)

ಕಂಪ್ಯೂಟರ್ ಕ್ಲೌಡಿಂಗ್ ನ ಅತ್ಯುತ್ತಮ ಅವಿಷ್ಕಾರಅಂದ್ರೆ ಅದು ಡ್ರಾಪ್ ಬಾಕ್ಸ್ ಎಂದೇ ಹೇಳ ಬೇಕು. ಪ್ರಾಧ್ಯಾ ಪಕರು ಗಲಿಬಿಲಿಯಲ್ಲಿ ತಮ್ಮ ಅಮೂಲ್ಯವಾದ ಡಿಜಿಟಲ್ ಡಾಕ್ಯುಮೆಂಟ್ಸ್(ಪೆನ್ ಡ್ರೈವ್ ,ಸಿ.ಡಿ ) ಗಳನ್ನು ಮರೆತು ಬಿಟ್ಟಲ್ಲಿ, ಡ್ರಾಪ್ ಬಾಕ್ಸ್ ಮೂಲಕ ಸಂಪರ್ಕದಲ್ಲಿರುವ ಕಂಪ್ಯೂಟರ್ ನಿಂದ ತಮ್ಮ ನೋಟ್ಸ್ ಗಳನ್ನೂ ಸುರಕ್ಷಿತವಾಗಿ ಬಳಸಿಕೊಳ್ಳ ಬಹುದು, ಅಷ್ಟೇ ಅಲ್ಲದೆ ತಮ್ಮ ಪರ್ಸನಲ್ ಡಾಕ್ಯುಮೆಂಟ್ ಗಳನ್ನೂ ಸುರಕ್ಷಿತವಾಗಿ ಡ್ರಾಪ್ ಬಾಕ್ಸ್ ನಲ್ಲಿ ಸೇವ್ ಮಾಡಿಟ್ಟು ಕೊಳ್ಳ ಬಹುದು !

2. Documents To Go(ಡಾಕ್ಯು ಮೆಂಟ್ಸ್ ಟು ಗೋ)

ಇದು ಎಲ್ಲಾ ಸ್ಮಾರ್ಟ್ಫೋನ್ ಹಾಗೂ PDA ಪ್ಲಾಟ್ ಫಾರ್ಮ್ ನಲ್ಲಿ ಲಭ್ಯ. ಈ APP ಮೈಕ್ರೋಸಾಫ್ಟ್ ಆಫೀಸ್ ನ ಎಲ್ಲಾ ಕಾರ್ಯಕ್ರಮಗಳನ್ನು ಹೊಂದಿದೆ, ಜೊತೆಗೆ ಡಿವೈಸ್ ನಲ್ಲಿ ಸೇವ್ ಮಾಡಲಾಗುವ ಕಡತಗಳನ್ನು ಉಳಿಸುವಲ್ಲಿ ಹಾಗೂ ಇತರೆ ಡಿವೈಸ್ ಗೆ ಹೊಂದಿಕೊಂಡು ಪ್ರವರ್ತಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

3. Lab Guru(ಲ್ಯಾಬ್ ಗುರು)ಇದು ಐಪ್ಯಾಡ್ ಒಡೆತನದ ಅತ್ಯಂತ ಜನಪ್ರಿಯ APP . ವಿಜ್ಞಾನ ಪ್ರಾಧ್ಯಾಪಕರ ಪ್ರಯೋಗಗಳ ರಚನೆ ಮತ್ತು ನಿರ್ವಹಣೆಯ ಜೊತೆಗೆ ವಿಧ್ಯರ್ಥಿಗಳೊಂದಿಗೆ ಶೇರ್ ಮಾಡುವಲ್ಲಿ ಮತ್ತು ನೋಟ್ ಮಾಡಲು ಸಹಕಾರಿಯಾಗಿದೆ .

4.Attendance(ಅಟೆಂಡೆನ್ಸ))ಶಿಕ್ಷಣ ಸಂಸ್ಥೆ ಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯ ಮೇಲೆ ನಿಗಾವಹಿಸಲು ಮತ್ತು ಗಮನಕೇಂದ್ರೀಕರಿಸಲು ಈ APP ಸಹಕಾರಿಯಾಗಿದೆ . ಇದು ಇಡೀ ಶಿಕ್ಷಣ ಸಂಸ್ಥೆಯ ಒಟ್ಟಾರೆ ವಿದ್ಯಾರ್ಥಿಗಳ ಹಾಜರಾತಿಯ ಬಗ್ಗೆ ನಿಖರವಾದ ಮಾಹಿತಿಯನು ನೀಡುತ್ತದೆ

5. Evernote(ಎವರ್ ನೋಟ್)ಆಯಾ ವಿಷಯಗಳಿಗೆ ಸಂಬಂಧ ಪಟ್ಟ ಡಿಜಿಟಲ್ ಕಡತಗಳನ್ನು ಮತ್ತು ಎಲ್ಲಾ ಅಗತ್ಯ ವಸ್ತುಗಳನ್ನು ಒಂದೆಡೆ ಶೇಖರಿಸಿ ನಿರ್ಧಿಷ್ಟ ಸ್ಥಳದಲ್ಲಿ ಲಭ್ಯವಾಗಿಸುವುದು ಈ APP ನ ವಿಶೇಷ . ಇದು ವಿಶ್ವದಲ್ಲಿ ಅತ್ಯಂತ ಮೆಚ್ಚುಗೆ ಪಡೆದ APP ಆಗಿದೆ

6.The Elements: A Visual Exploration(ಡಿ ಎಲಿಮೆಂಟ್ಸ್ ಅ ವಿಶುಯಲ್ ಎಕ್ಸ್ ಪ್ಲೋರೆಶನ್ ) ವನ್ನು ಇಷ್ಟಪಡದೆ ಇರುವವರು ಸಹ ಇದನ್ನು ಇಷ್ಟ ಪಡುತ್ತಾರೆ. ಪ್ರಸ್ತುತ APPನಲ್ಲಿ ರಸಾಯನಶಾಸ್ತ್ರದ ಬಗ್ಗೆ ಸಂಪೂರ್ಣವಾದ ವಿವರವಾದ ಫೋಟೋಗಳ ಜೊತೆಗೆ ದೈನಂದಿನ ಜೀವನದಲ್ಲಿ ಬಳಸುವ ಎಲ್ಲಾ ಮೂಲಭೂತ ಅಂಶಗಳನ್ನು ಮತ್ತು ವಸ್ತು ವಿಷಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಆವರ್ತಕ ಕೋಷ್ಟಕದಲ್ಲಿ ವಿವರಿಸುತ್ತದೆ.

7. TED(ಟಿ.ಇ.ಡಿ)

ಸಾಮಾನ್ಯವಾಗಿ ಈ APP ನ್ನು ಎಲ್ಲ ಶಿಕ್ಷಕರು ಇಷ್ಟಪಡುತ್ತಾರೆ. ಪ್ರಸ್ತುತ APP ನಲ್ಲಿ ಅಸಂಖ್ಯಾತ ವಿಷಯಗಳು ಹೊಂದಿದೆ. ಶಿಕ್ಷಕರು ತಮ್ಮ ತರಗತಿಯ ಪಾಠಗಳನ್ನು, ಉಪನ್ಯಾಸಗಳನ್ನು ಪೂರಕವಾಗಿಟೆಡ್ ನಲ್ಲಿ ಶೇಖರಿಸ ಬಹುದು. ಅಷ್ಟೇ ಅಲ್ಲದೆ ತಮ್ಮಗೆ ತಿಳಿದಿರದ ವಿಷಯಗಳ ಬಗ್ಗೆ TED ಮೂಲಕ ತಿಳಿದು ಕೊಳ್ಳ ಬಹುದು

8.Twitter(ಟ್ವಿಟರ್)

ವಿದ್ಯಾರ್ಥಿಗಳಿಗೆ ಪರೀಕ್ಷೆ ಯ ಬಗ್ಗೆ ಮುನ್ಸೂಚನೆ ನೀಡುವುದು ಅಥವಾ ನೆನಪಿಸುವುದು, ಆನ್ ಲೈನ್ ಮೂಲಕ ಅಧ್ಯಯನ ವಿಷಯಗಳ ಬಗ್ಗೆ ಸೂಕ್ತ ಮಾಹಿತಿ ನೀಡುವುದರಲ್ಲಿ, ತರಗತಿಯ ಅತ್ಯಗತ್ಯ ವಿಚಾರಗಳನ್ನು ಬಳಸುವಲ್ಲಿ ಟ್ವಿಟರ್ ಸದಾ ಮೊದಲ ಆದ್ಯತೆಯನ್ನು ಪಡೆಯುತ್ತದೆ.

9. Science 360(ಸೈನ್ಸ್ 360)

ಆಂಡ್ರಾಯ್ಡ್ ಮತ್ತು ಐ ಫೋನ್ ಬಳಕೆದಾರರು ವಿಜ್ಞಾನಕ್ಕೆ ಸಂಬಂಧ ಪಟ್ಟ ಆಡಿಯೋ ಕ್ಲಿಪ್ ಮತ್ತು ವಿಡಿಯೋ ಕ್ಲಿಪ್ ಗಳನ್ನು ತಮ್ಮ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬಹುದು. ಅಷ್ಟೇ ಅಲ್ಲದೆ ವೈಯಕ್ತಿಕವಾಗಿ ತಮ್ಮ ಜ್ಞಾನ ಉತ್ತೇಜಿಸಲು ಈ APP ಅನ್ನು ಬಳಸಬಹುದು .

10. Quick Graph(ಕ್ವಿಕ್ ಗ್ರಾಫ್)ಗಣಿತ ವಿಷಯದ ಪ್ರಾಧ್ಯಾಪಕರು ಕ್ವಿಕ್ ಗ್ರಾಫ್ ನ ಮೂಲಕ ಎರಡು ಮತ್ತು ಮೂರು ಆಯಾಮಗಳಲ್ಲಿ ಸಮೀಕರಣಗಳನ್ನು ಸಂಕ್ಷಿಪ್ತ ವಾಗಿ ತಿಳಿಸಲು ಈ ಅಪ್ಲಿಕೇಶನ್ ಬಳಸಬಹುದು.ಅಷ್ಟೇ ಅಲ್ಲದೆ ಇದರಲ್ಲಿಕಂಪ್ಯು ಟಿಂಗ್ ನೊಂದಿಗೆ ಅತ್ಯಂತ ಕ್ಲಿಷ್ಟಕರವಾದಲೆಕ್ಕಗಳನ್ನು ದೃಶ್ಯಗಳ ಮೂಲಕ ವಿವರವಾಗಿ ತಿಳಿಸಬಹುದು .

11. Keynote(ಕೀ ನೋಟ್) 

ಸಮ್ಮೇಳನಗಳಲ್ಲಿ, ಅಥವಾ ಉಪನ್ಯಾಸಗಳನ್ನು ನೀಡುವ ಸಂದರ್ಭದಲ್ಲಿ ಮೈಕ್ರೋ ಸಾಫ್ಟ್ ಪವರ್ ಪಾಯಿಂಟ್ ನ ನೆರವಿಲ್ಲದೆ ಮಲ್ಟಿ ಮೀಡಿಯದೊಂದಿಗೆ ಈ APP ಮೂಲಕತಮ್ಮ ವಿಷಯವನ್ನು ಪ್ರಸ್ತುತ ಪಡಿಸಬಹುದು.

12. TeacherKit(ಟೀಚರ್ ಕಿಟ್)

 ಕೇವಲ ಐ ಫೋನ್ ನಲ್ಲಿ ಮಾತ್ರ ಲಭ್ಯ. ಈ ಅಪ್ಲಿಕೇಶನ್ ಒಬ್ಬ ಶಿಕ್ಷಕನ ಸಹಾಯಿಯಂತೆ ಕಾರ್ಯ ನಿರ್ವಹಿಸುತ್ತದೆ ಕೆಲಸಕ್ಕೆ ಸಂಬಂಧ ಪಟ್ಟ ದಾಖಲೆಯ ಶ್ರೇಣಿಗಳನ್ನು ಮತ್ತು ಹಾಜರಾತಿ, ಮತ್ತು ಸಾಕಷ್ಟು ವಿಷಯಗಳನ್ನು ಇದು ಹೊಂದಿದೆ. ಶಿಕ್ಷಕ ತನ್ನ ಅಗತ್ಯಕ್ಕೆ ತಕ್ಕ ಹಾಗೆ ಟೀಚರ್ ಕಿಟ್ APP ನ್ನು ಬಳಸಬಹುದು

13. Teacher Aide Pro(ಟೀಚರ್ ಎಡ್ ಪ್ರೊ )

ಟೀಚರ್ ಕಿಟ್ ಬಳಸಲು ಆಗದವರು ಆಂಡ್ರಾಯಿಡ್ ನ ಟೀಚರ್ ಎಡ್ ಪ್ರೊ ಬಳಸಬಹುದು.ಈ APP ಟೀಚರ್ ಕಿಟ್ ನಲ್ಲಿರುವ ಎಲ್ಲ ಅಂಶಗಳನ್ನು ಒಳಗೊಂಡಿದೆ

14. Google Apps(ಗೂಗಲ್ APPs)

ಒಂದರ ಬದಲಿಗೆ ಅನೇಕ ಅಪ್ಲಿಕೇಶನ್ ಗಳನ್ನು ಒಂದೇ ಪ್ಲಾಟ್ ಫಾರ್ಮ್ ನಲ್ಲಿ ಬಳಸಬಹುದು , ಆಂಡ್ರಾಯ್ಡ್, ಐಪ್ಯಾಡ್, ಐಫೋನ್, ಬ್ಲಾಕ್ ಬೆರ್ರಿ ,ವಿಂಡೋಸ್ ಫೋನ್, ಅಥವಾ ಯಾವುದೇ ಮೊಬೈಲ್ ಗ್ಯಾಜೆಟ್ಇರಲಿ, ಗೂಗಲ್ APPs ನ ಸಹಾಯದೊಂದಿಗೆ ಹಲವು APP ಗಳ ಲಾಭ ಪಡೆಯಬಹುದು.

15. Blackboard Mobile Learn(ಬ್ಲ್ಯಾಕ್ ಬೋರ್ಡ್ ಮೊಬೈಲ್ ಲರ್ನ್)

ಬಹಳಷ್ಟು ಕಾಲೇಜ್ ಮತ್ತು ವಿಶ್ವ ವಿದ್ಯಾನಿಲ ಗಳು ಬ್ಲ್ಯಾಕ್ ಬೋರ್ಡ್ ಅಪ್ಲಿಕೇಶನ್ ಮೂಲಕ ಆನ್ ಲೈನ್ ಕೋರ್ಸ್ ಗಳನ್ನು ನಡೆಸುತ್ತದೆ. ತಂತ್ರಜ್ಞಾನದ ಮತ್ತು ಮೊಬೈಲ್ ಮೂಲಕ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಅವಕಾಶ ಈ APP ಒದಗಿಸುತ್ತದೆ.

16. eClicker Polling System(ಇ ಕ್ಲಿಕ್ಕರ್ ಪೋಲಿಂಗ್ ಸಿಸ್ಟಂ)

ಸಂಕೀರ್ಣವಾದ ಅಥವಾ ವಿಶಾಲವಾದ ಪವರ್ ಪಾಯಿಂಟ್ , ಕೀ ನೋಟ್ ಪ್ರಸ್ತುತಿ, ರೇಖಾ ಚಿತ್ರ , ಪೋಲಿಂಗ್, ಪವರ್ ಪಾಯಿಂಟ್ ಸ್ಲೈಡ್ ಗಳ ರಚನೆ ಮತ್ತು ನಿರೂಪಣೆಮತ್ತು ಹಲವು ವೈಶಿಷ್ಟ್ಯ ಗಳನ್ನೂ ಒಳಗೊಂಡ ಈ APP ಅತ್ಯಂತ ಪರಿಣಾಮ ಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.

17. Wikipedia(ವಿಕಿ ಪೀಡಿಯಾ)

ತನ್ನಲ್ಲಿನ ವಿಶಾಲ, ಮುಕ್ತ ಸಂಪಾದನೆ, ರಚನೆಯ ಹೊರತಾಗಿಯೂ, ವಿಕಿಪೀಡಿಯ ನಿಖರ ಮತ್ತು ಲಭ್ಯವಿರುವ ನೈಜ ಮಾಹಿತಿಯನ್ನು ನೀಡುತ್ತದೆ. ಪ್ರಾಧ್ಯಾಪಕರುಗಳಿಗೆ ಸಾಕಷ್ಟು ಸಂಶೋಧನೆಗೆ ನೆರವಾಗಿದೆ .

18.CourseSmart(ಕೋರ್ಸ್ ಸ್ಮಾರ್ಟ್)

ಕೋರ್ಸ್ ಸ್ಮಾರ್ಟ್ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಗಳಲ್ಲಿ ಲಭ್ಯವಾದ APP ಆಗಿದ್ದು, ಈ ಅಪ್ಲಿಕೇಶನ್ ವಿಧ್ಯಾರ್ಥಿಗಳಿಗೆ , ಉಪನ್ಯಾಸಕರಿಗೆ,ಶಿಕ್ಷಕರಿಗೆ ಸಾವಿರಾರು ಪಠ್ಯಪುಸ್ತಕಗಳನ್ನು ಓದಬಹುದಾಗಿದೆ.

19. Bento(ಬೆಂಟೊ)

ಐ ಫೋನ್ ಡಿವೈಸ್ ಗಳಿಗೆ ಮಾತ್ರ ಅಭಿವೃದ್ಧಿ ಪಡಿಸಲಾದ ಈ ಅಪ್ಲಿಕೇಶನ್ ಪ್ರಾಜೆಕ್ಟ್ ಪ್ಲಾನಿಂಗ್ ಮತ್ತು ಅದನ್ನು ರಚಿಸುವ ಪ್ರಕ್ರಿಯೆಗೆ ಉಪಯುಕ್ತವಾಗಿದೆ.

20. Edmodo(ಎಡ್ ಮೊಡೋ)

ಫೇಸ್ ಬುಕ್ ಮತ್ತು ಟ್ವಿಟರ್ ನಂತಹ ಜಾಲತಾಣ ಗಳಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿಗಳು ವಯಕ್ತಿಕವಾಗಿ ಯಾವುದೇ ರೀತಿಯ ತರಗತಿಯ ವಸ್ತುಗಳ ಬಗ್ಗೆ ಚರ್ಚಿಸುವುದಾಗಲಿ ಶೇರ್ ಮಾಡಲು ಸಾಧ್ಯವಿಲ್ಲ ಹಾಗೆ ಗೌಪ್ಯತೆಗೂ ಸಹ ಇಲ್ಲಿ ಆಸ್ಪದವಿಲ್ಲ. ಎಡ್ ಮೊಡೋ APP ನ ಮೂಲಕ ವಿದ್ಯಾರ್ಥಿ ಮತ್ತು ಶಿಕ್ಷಕರು ನಡುವೆ ಪರಸ್ಪರ ತರಗತಿಯ ವಸ್ತುಗಳ ಬಗ್ಗೆ ಸಮಾಲೋಚನೆ ನಡೆಸಬಹುದು.

21. QuickOffice Pro(ಕ್ವಿಕ್ ಆಫೀಸ್ ಪ್ರೊ )

$ 14,99 ಮೌಲ್ಯದ ಈ APP ಐ ಫೋನ್ ಡಿವೈಸ್ ಮತ್ತು ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಲಭ್ಯವಾಗಿದೆ . ಈ APP ಮೂಲಕ ಮೈಕ್ರೋಸಾಫ್ಟ್ ಆಫಿಸ್ ನ ಎಲ್ಲ ಟೂಲ್ಸ್ ಗಳನ್ನು ಯಾವುದೇ ಅದೇ ತಡೆ ಇಲ್ಲದೆ ಬಳಸಬಹುದು.

22. Box(ಬಾಕ್ಸ್)

ಯಾವುದೇ ಕಂಪ್ಯೂಟರ್ ಮೂಲಕ ಹೋಸ್ಟ್ ಮಾಡಲಾದ ಫೈಲ್ ಗಳನ್ನು ಪುನರ್ ಬಳಸುವ ಅವಕಾಶದ ಜೊತೆಗೆ ಪ್ರಮುಖ ದಾಖಲೆಗಳ ಗೌಪ್ಯತೆ ಯನ್ನು ಕಾಪಾಡುವ ಅತ್ಯಂತ ಜನಪ್ರಿಯ ಕ್ಲೌಡ್ ಕಂಪ್ಯೂಟಿಂಗ್ APP ಆಗಿದೆ. 

23. iAnnotate(ಐ ಅನ್ನೋಟೆಟ್)

ಈ APP ಮೂಲಕ ಶಿಕ್ಷಣಕ್ಕೆ ಸಂಬಂಧ ಪಟ್ಟ ಕೆಲಸಗಳನ್ನು ಮಾಡಬಹುದು. ನೋಟ್ ಮಾಡುವುದು,ಟಿಪ್ಪಣಿಗಳು ಬರೆಯುವುದು , ಬುಕ್ ಮಾರ್ಕ್ ಮಾಡುವುದು, ಹೈಲೈಟ್ ಮಾಡುವುದರ ಜೊತೆಗೆ PDF ಫೈಲ್ ಗಳನ್ನೂ ಸಹ ಬಳಸಬಹುದು .

24.Mendeley(ಮೆಂಡೆಲೆ)ಸಂಶೋಧನೆಗಳಲ್ಲಿ ನಿರತರಾದ ಪ್ರಾಧ್ಯಾಪಕರುಗಳು, ತಮ್ಮ ಸಂಶೋಧನೆಯಾ ಸಂಕಲನ ಮತ್ತು ಸಂಘಟಿಸುವಿಕೆಯ ಬಗ್ಗೆ , ಹಾಗೂ ಇತರ ವೃತ್ತಿಪರ ಹಾಗೂ ಶಿಕ್ಷಕರೊಂದಿಗೆ ಶೇರ್ ಮಾಡುವುದು ಮತ್ತು ದಾಖಲೆಗಳನ್ನು ಅಪ್ಡೇಟ್ ಮಾಡವುದು ಹಾಗು ಸಂಪರ್ಕದಹೋದಳು Mendeley ಬಹಳ ಉಪಕಾರಿಯಾಗಿದೆ. ಇದು ಐ ಫೋನ್ ನಲ್ಲಿ ಮಾತ್ರ ಲಭ್ಯ.

25.Popplet(ಪೊಪ್ಲೆಟ್)

ಪೇಪರ್ ಪ್ರೆಸೆಂಟೇಷನ್ ಮಾಡುವ ಮುನ್ನ ತಮ್ಮ ಕಾಲ್ಪನಿಕ ಶಕ್ತಿಯನ್ನು ಸ್ಮರಣೀಯ ಗೊಳಿಸಿ ಚೊಕ್ಕವಾಗಿ , ಪರಿಣಾಮಕಾರಿಯಾದ ಉಪನ್ಯಾಸಗಳನ್ನು ತ್ವರಿತ ರೀತಿಯಲ್ಲಿ ಪ್ರಸ್ತುತ ಪಡಿಸಲು Poppletಬಹಳ ಉಪಯುಕ್ತವಾದ ಅಪ್ಲಿಕೇಶನ್ ಆಗಿದೆ.

26. Exam Preparations, Daily hunt (ಎಕ್ಸಾಂಪ್ರಿಪರೇಷನ್, ಡೈಲಿ ಹಂಟ್)

ಹಂಟ್ ಅಪ್ಲಿಕೇಶನ್ ವತಿಯಿಂದExam Preparationsಎಂಬ ಹೊಸ APP ಬಿಡುಗಡೆ ಮಾಡಲಾಗಿದೆ . ಈ ಅಪ್ಲಿಕೇಶನ್ ಮೂಲಕ ವಿವಿಧ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬಹುದು. - IAS (CSAT), IBPS RRB exams, Bank PO, Clerk, SSC, UPSC, UGC NET, LIC, Railways, NDA, CDS, TET ಮುಂತಾದ ಪರೀಕ್ಷೆಗಳಿಗೆ ಬೇಕಾದ ಉತ್ತಮ ಗುಣಮಟ್ಟದ ಅಧ್ಯಯನದ ವಸ್ತುಗಳು, ಕ್ವೆಶನ್ ಬ್ಯಾಂಕ್ , ಅಭ್ಯಾಸ ಪರೀಕ್ಷೆಗಳು ಮತ್ತು ಅಣಕು ಪರೀಕ್ಷೆಗಳ ಲಾಭವನ್ನು ಪಡೆಯಬಹುದು.Exam PreparationsAPP ಪ್ರಚಲಿತ ವಿದ್ಯಮಾನಗಳ ಕುರಿತು, ಪರೀಕ್ಷೆಯ ಫಲಿತಾಂಶಗಳ ಕುರಿತು ಮಾಹಿತಿ ನೀಡುವುದಷ್ಟೇ ಅಲ್ಲದೆ ಪೀರ್ ಶ್ರೇಣಿಯೊಂದಿಗೆ ತಯಾರಿ ನಡೆಸಲು ಸಹಾಯ ಮಾಡುತ್ತದೆ. ಪರೀಕ್ಷೆಗೆ ಸಂಬಂಧ ಪಟ್ಟ ದಿನಾಂಕ, ಸೂಚನೆ, ವಿವರಗಳನ್ನು ನೀಡುತ್ತದೆ.

27. Byju's APP(ಬೈಜು APP)

ವಿಶುವಲ್ ಎಫೆಕ್ಟ್ ನೊಂದಿಗೆ ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿಜ್ಞಾನ , ಗಣಿತ ವಿಷಯಗಳ ಸಣ್ಣ ಮತ್ತು ಸಂಕೀರ್ಣ ಲೆಕ್ಕ ಗಳನ್ನು ಸರಳ ಮತ್ತು ಪರಿಣಾಮಕಾರಿಯಾಗಿ ಮಕ್ಕಳಿಗೆಅರ್ಥವಾಗುವಂತೆ ತಿಳಿಸಿ ಕೊಡುವ ವಿಶಿಷ್ಠವಾದ APP ಆಗಿದೆ . ಬೈಜು ರವೀಂದ್ರನ್ ಈ ಅಪ್ಲಿಕೇಶನ್ ನ ರೂವಾರಿಯಾಗಿದ್ದಾರೆ . ಶಾಲಾ ವಿಧ್ಯಾರ್ಥಿಗಳು ಮಾತ್ರ ವಲ್ಲದೆ JEE, AIPMT, CAT & IAS ಪರೀಕ್ಷೆಗಳಿಗೆ ತಯಾರಿ ನಡೆಸುವವರೂ ಸಹ ಬೈಜು APPನ ಲಾಭ ಪಡೆಯಬಹುದು.

28. Edx(ಇಡಿ.ಎಕ್ಸ್)

ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳಿಂದ ಉಚಿತವಾಗ ಆನ್ಲೈನ್ ಶಿಕ್ಷಣವನ್ನು Edx ಮೂಲಕ ಪಡೆಯಬಹುದು .Harvard University, MIT, UC Berkeley, Tsinghua University, Microsoft, Linux, The Smithsonian ವಿಶ್ವ ವಿದ್ಯಾನಿಲಯಗಳ ಶ್ರೇಷ್ಠ ತಜ್ಞರು, ನುರಿತ ಉಪನ್ಯಾಸಕರ ನೆರವಿನೊಂದಿಗೆ ಪಾಠ ಕಲಿಯ ಬಹುದು.ಕಂಪ್ಯೂಟರ್ ವಿಜ್ಞಾನ, ಎಂಜಿನಿಯರಿಂಗ್, ಇತಿಹಾಸ, ಮನಃಶಾಸ್ತ್ರ, ಪೋಷಣೆ, ದೊಡ್ಡ ದಶಮಾಂಶ, ಸ್ಟಾಟಿಸ್ ಟಿಕ್ಸ ಮತ್ತು ಹೆಚ್ಚುವಿಷಯಗಳ ಕುರಿತು ಕೋರ್ಸ್ ಮಾಡಬಹುದು.

ಓದುವಿಕೆ ಎನ್ನುವುದು ಅತ್ಯುತ್ತಮ ಹವ್ಯಾಸ. ತಕ್ಷಣವೇ ಕ್ಲಿಕ್ ಮಾಡಿ ನಿಮ್ಮನು ಓದುಗರ ಜಗತ್ತಿನಲ್ಲಿ ಕಂಡುಕೊಳ್ಳಿ.

ಪ್ರಾಚೀನ ಭಾರತದ ಮಹಾನ್ ವಿಜ್ಞಾನಿ - ಸುಶ್ರುತ

 


ಸುಶ್ರುತ

ವೈದಿಕಯಷಿ ವಿಶ್ವಾಮಿತ್ರನ ವಂಶಸ್ಸಕ್ರಿ.ಪೂ. 600 ವರ್ಷಕ್ಕಿಂತ ಪೂರ್ವದಲ್ಲಿ ಜನಿಸಿದ್ದರು. ಅವರು ಪ್ರಾಚೀನ ಭಾರತದ ಒಬ್ಬ ಪ್ರಸಿದ್ದ ಶಲ್ಯ ಚಿಕಿತ್ಸಕರಿದ್ದು, ಅವರು ವೈದ್ಯರ ಹಾಗೂ ಶಲ್ಯ ಚಿಕಿತ್ಸೆಯ ಜ್ಞಾನವನ್ನು ವಾರಣಾಸಿಯ ದಿವೋದಾಸ ಧನ್ವಂತರಿಯ ಆಶ್ರಮದಿಂದ ಪಡೆದರು.

ಸುಶ್ರುತರು ಶಲ್ಯ ಚಿಕಿತ್ಸೆಯೊಂದಿಗೆ ವೈದ್ಯಕೀಯ ಆನೇಕ ರಂಗಗಳಲ್ಲಿ ಪಾರಂಗತರಿದ್ದರು. ವಿಶ್ವದ ಚಿಕಿತ್ಸಾ ಇತಿಹಾಸದಲ್ಲಿ ಸುತ್ತುತರಿಗೆ ಶಲ್ಯ ಚಿಕಿತ್ಸೆಯ ಜನಕರೆಂದು ಮನ್ನಿಸಲಾಗುತ್ತದೆ. ಶಲ್ಯದ ಅರ್ಥ ಶರೀರದ ಪೀಡೆ ಹಾಗೂ ಆ ಪೀಡೆಯನ್ನು ಉಪಕರಣಗಳ ಪ್ರಯೋಗದಿಂದ ದೂರ ಮಾಡುವ ಕ್ರಿಯೆಗೆ ಶಲ್ಯ ಚಿಕಿತ್ಸಾ ಅಥವಾ ಸರ್ಜರಿ ಎಂದು ಹೆಸರಿಡಲಾಗಿದೆ.

ಸುತ್ತುತರು ಮೊದಲಿಗೆ ಚಿಕಿತ್ಸಕರು, ಅವರು ಚಿಕಿತ್ಸಾದ ಪ್ರಚಾರ ಮಾಡಿದರು, ಅವರು ಶಲ್ಯ ಚಿಕಿತ್ಸಕರನ್ನು ಅವರೇಶನದ ಪೂರ್ವ ಉಪಕರಣಗಳನ್ನು ಬೆಂಕಿಯಲ್ಲಿ ಕಾಸುವ ಸಲಹೆ ನೀಡಿದರು. ಅದರಿಂದಾಗಿ ಕೀಟಾಣುಗಳು ಸತ್ತು ಹೋಗುವವು, ಅವರ ಸಲಹೆ ಯಿಂದ ರೋಗಿಗೆ ಶಲ್ಯ ಚಿಕಿತ್ಸೆಯ ಪೂರ್ವ ಮದಿರಾಪಾನ ಮಾಡಿಸಬೇಕೆಂಬುದು ಅದು ಎನ್‌ಸೈಸಿಯಾ ಪರಿಣಾಮವ,

ಒಂದು ಬಾರಿ ಒಬ್ಬ ಅಪರಿಚಿತನು ದುರ್ಘಟನೆಯಲ್ಲಿ ಮೂಗು ಒಡೆದು ಕೊಂಡು ಸುಶ್ರುತರಲ್ಲಿಗೆ ಬಂದನು. ಸುಶ್ರುತರು ಅವನ ಬಾಯಿಯನ್ನು ಔಷಧದ ನೀರಿನಿಂದ ತೊಳೆದರು. ತಮ್ಮ ಉಪಕರಣಗಳನ್ನು ಕಾಸಿದರು. ನಂತರ ಅವನ ಗಲ್ಲದಿಂದ ತುಸು ಮಾಂಸವನ್ನು ಕೊಯ್ದು ತೆಗೆದು ಅವನ ಮೂಗಿನ ಮೇಲೆ ಔಷಧದಿಂದ ಹಚ್ಚಿ ಆಕಾರ ಮಾಡಿದರು. ಮೂಗಿನ ಮೇಲೆ ದಾರಾಅರಿಷಿಣದ ರಸ ಹಚ್ಚಿ ಅದನ್ನು ಅರಳೆ ಯಿಂದ ಮುಚ್ಚಿ ಕಟ್ಟಿದರು. ನಂತರ ಅವನಿಗೆ ಔಷಧಗಳ ಸೂಜಿಪಟ್ಟ ನೀಡಿದರು. ಅದನ್ನು ಪ್ರತಿನಿತ್ಯ ಸೇವಿಸಬೇಕೆಂದು ಸಲಹೆ ನೀಡಿದರು.

ಈ ಪ್ರಕಾರ ಸುಶ್ರುತರು ಪೂರ್ವದಲ್ಲಿ ಅವರು ಏನೆಲ್ಲ ಮಾಡಿದರೋ ಅವೆಲ್ಲವೂ ಇಂದಿನ ಯುಗದಲ್ಲಿ ಪ್ಲಾಸ್ಟಿಕ್ ಸರ್ಜರಿಯ ಎನ್ನುವ ಹೆಸರಿನಲ್ಲಿ ಪ್ರಚಲಿತಕ್ಕೆ 67

ಬಂದಿದೆ. ಸುಶ್ರುತರು ಶಲ್ಯ ಚಿಕಿತ್ಸೆಯಲ್ಲಿ ಅದ್ಭುತ ಕೌಶಲ್ಯವನ್ನು ಪಡೆದಿದ್ದರು. ಅವರು ಮುಂದೆ ಎಲುವು ಜೋಡಿಸುವುದರಲ್ಲಿ ಹಾಗೂ ಮೋತಿಬಿಂದು ಚಿಕಿತ್ಸೆಯಲ್ಲಿ ವಿಶೇಷ ಪರಿಣಿತರಿದ್ದರು. ಮನುಷ್ಯನ ಶರೀರದಲ್ಲಿ ಇರುವ ಕೀಯೆಗಳ ವರ್ಗಿಕರಣ ರಕ್ತ ಹೀರುವ ಜಿಗಳಿ ಹಾಗೂ ಪಶುಗಳ ಒಂದು ಅಸ್ಪಷ್ಟ ವರ್ಗಿಕರಣವನ್ನು ಸುಶ್ರುತ ಮಾಡಿದ್ದರು.

ಸುತ್ತುತರು ಬೇರೆ ಬೇರೆ ಋತುಗಳು ಹಾಗೂ ಅವುಗಳ ಮುಖದಿಂದ ಮನುಷ್ಯರು, ಜಯಗಳು ಮತ್ತು ವನಸ್ಪತಿಗಳ ಮೇಲೆ ಆಗುವ ಪ್ರಭಾವದ ಮೇಲೆ ವೈಜ್ಞಾನಿಕ ವಿಚಾರವನ್ನು ತಿಳಿಸಿದರು.

ಸುಶ್ರುತದಿಂದ ಬರೆದ ಪುಸ್ತಕ 'ಸುಶ್ರುತ ಶಲ್ಯ ತಂತ್ರ' ಅಥವಾ ಸುಶ್ರುತ ಸಂಹಿತಾ ಅತ್ಯಧಿಕ ಮಹತ್ವದ್ದೆಂದು ಮನ್ನಿಸಲಾಗುತ್ತದೆ, ಅವರು ಈ ಸಂಹಿತೆಯಲ್ಲಿ ಸೀಳಿ ಕೊಯ್ಯುವ ಪದ್ಧತಿ ಹಾಗೂ ಬೇರೆ ಬೇರೆ ಉಪಕರಣಗಳ ವಿಷಯವನ್ನು ಬರೆದಿದ್ದಾರೆ. ಅವರು ತಮ್ಮ ಉಪಕರಣಗಳ ಹೆಸರುಗಳನ್ನು ಪಕ್ಷಿಗಳ ಹಾಗೂ ಪಶುಗಳ ಹೆಸರಿನಲ್ಲಿ ಇಟ್ಟು ಆ ಮುಖದಿಂದ ತಮ್ಮ ಉಪಕರಣವನ್ನು ತಿಳಿದುಕೊಳ್ಳುತ್ತಿದ್ದರು. ಅವುಗಳಲ್ಲಿ ಕೆಲವು ಹೆಸರುಗಳು ಇಂದಿಗೂ ಪ್ರಸಿದ್ಧವಾಗಿವೆ.

ಸುಶ್ರುತ ಸಂಹಿತಾ ಸಂಸ್ಕೃತ ಭಾಷೆಯಲ್ಲಿದೆ. ಇದರ 120 ಅಧ್ಯಾಯಗಳಲ್ಲಿ ಶಲ್ಯ ಚಿಕಿತ್ಸಾ ಹಾಗೂ ಅನ್ಯ ಅಧ್ಯಾಯಗಳಲ್ಲಿ ಶರೀರ ಚಿಕಿತ್ಸೆಯ ಬಗೆಗೆ ಬರೆಯಲಾಗಿದೆ. ಇದಲ್ಲದೆ ಸುಶ್ರುತ ಸಂಹಿತೆಯಲ್ಲಿ ಆಯುರ್ವೇದದ ಬೇರೆ ಬೇರೆ ಪರೀಕ್ಷೆ, ನೇತ್ರ ತಲೆನೋವು ಹಾಗೂ ಪ್ಲಾಸ್ಟಿಕ್ ಸರ್ಜರಿ ಮೊದಲಾದ ವಿಷಯಗಳ ಬಗೆಗೂ ತಿಳುವಳಿಕೆ ನೀಡಲಾಗಿದೆ.

ಎಂಟನೇ ಶತಾಬಿಯಲ್ಲಿ ಸುರುತ ಸಂಹಿತಾ ಅರಬ್ಬಿ ಭಾಷೆಯಲ್ಲಿ ಅನುವಾದ ವಾಯಿತು. ಅನುವಾದಿತ ಪುಸ್ತಕಗಳ ಹೆಸರುಗಳು - ಕಿತಾಬಶ ಶೂನ ಎ ಹಿಂದಿ ಮತ್ತು ಕಿಶಾಚಿ ಸುಸುರದು.


ತಮ್ಮ ಪುಸ್ತಕದಲ್ಲಿ ಸುತ್ತುತರು - ಮಾನವ ಶರೀರದ ಪೂರ್ಣಜ್ಞಾನ ಪಡೆಯಲು ಶವ ಪರೀಕ್ಷಣ ಅಥವಾ ಶವವನ್ನು ಕೊಯ್ಯುವದು, ಸೀಳುವದು ಅತೀ ಅವಶ್ಯಕವೆಂದು ಹೇಳಿದ್ದಾರೆ.

Tuesday, October 27, 2020

ವಿಜ್ಞಾನ ಜಗತ್ತು

 

"ವಿಜ್ಞಾನ ಜಗತ್ತು " "Science World "

ಸಾಮಾನ್ಯ ವಿಜ್ಞಾನದ ಪ್ರಶ್ನೆಗಳು.
ಸಾಮಾನ್ಯ ವಿಜ್ಞಾನ :

1) ವಿಶ್ವದಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಜಲಜನಕ.*

2) ಅತಿ ಹಗುರವಾದ ಲೋಹ ಯಾವುದು?
* *ಲಿಥಿಯಂ.*

3) ಅತಿ ಭಾರವಾದ ಲೋಹ ಯಾವುದು?
* *ಒಸ್ಮೆನೆಯಂ.*

4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
* *ಸೈನೈಡೇಶನ್.*

5) ಅತಿ ಹಗುರವಾದ ಮೂಲವಸ್ತು ಯಾವುದು?
* *ಜಲಜನಕ.*

6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಸಾರಜನಕ.*

7) ಪ್ರೋಟಾನ್ ಕಂಡು ಹಿಡಿದವರು ಯಾರು?
* *ರುದರ್ ಫರ್ಡ್.*

8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಆಮ್ಲಜನಕ.*

9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೇಮ್ಸ್ ಚಾಡ್ ವಿಕ್.*

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೆ.ಜೆ.ಥಾಮ್ಸನ್.*

11) ಒಂದು ಪರಮಾಣುವಿನಲ್ಲಿರುವ
ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ
ಸಂಖ್ಯೆಯೇ -----?
* *ಪರಮಾಣು ಸಂಖ್ಯೆ.*

12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ
ಮೂಲವಸ್ತು ಯಾವುದು?
* *ಹಿಲಿಯಂ.*

13) ಮೂರ್ಖರ ಚಿನ್ನ ಎಂದು ಯಾವುದನ್ನು
ಕರೆಯುತ್ತಾರೆ?
* *ಕಬ್ಬಿಣದ ಪೈರೆಟ್ಸ್.*

14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -----
ಬಳಸುತ್ತಾರೆ?
* *ಒಸ್ಮೆನಿಯಂ.*

15) ಪ್ರಾಚೀನ ಕಾಲದ ಮಾನವ ಮೊದಲ
ಬಳಸಿದ ಲೋಹ ಯಾವುದು?
* *ತಾಮ್ರ.*

16) ಉದು ಕುಲುಮೆಯಿಂದ ಪಡೆದ ಕಬ್ಬಿಣ
ಯಾವುದು?
* *ಬೀಡು ಕಬ್ಬಿಣ.*

17) ಚಾಲ್ಕೋಪೈರೇಟ್ ಎಂಬುದು ------- ದ
ಅದಿರು.
* *ತಾಮ್ರದ.*

18) ಟಮೋಟದಲ್ಲಿರುವ ಆಮ್ಲ ಯಾವುದು?
* *ಅಕ್ಸಾಲಿಕ್.*

20) "ಆಮ್ಲಗಳ ರಾಜ" ಎಂದು ಯಾವ
ಆಮ್ಲವನ್ನು ಕರೆಯುವರು?
* *ಸಲ್ಫೂರಿಕ್ ಆಮ್ಲ.*

21) ಕಾಸ್ಟಿಕ್ ಸೋಡದ ರಾಸಾಯನಿಕ
ಹೆಸರೇನು?
* *ಸೋಡಿಯಂ ಹೈಡ್ರಾಕ್ಸೈಡ್.*

22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು
ಯಾವುದನ್ನು ಕರೆಯುವರು?
* *ಮೆಗ್ನಿಷಿಯಂ ಹೈಡ್ರಾಕ್ಸೈಡ್.*

23) ಅಡುಗೆ ಉಪ್ಪುವಿನ ರಾಸಾಯನಿಕ
ಹೆಸರೇನು?
* *ಸೋಡಿಯಂ ಕ್ಲೋರೈಡ್.*

24) ಗಡಸು ನೀರನ್ನು ಮೃದು ಮಾಡಲು -----
ಬಳಸುತ್ತಾರೆ?
* *ಸೋಡಿಯಂ ಕಾರ್ಬೋನೆಟ್.*

25) ಕೆಂಪು ಇರುವೆ ಕಚ್ಚಿದಾಗ ಉರಿಯಲು
ಕಾರಣವೇನು?
* *ಪಾರ್ಮಿಕ್ ಆಮ್ಲ.*

26) ಗೋಧಿಯಲ್ಲಿರುವ ಆಮ್ಲ ಯಾವುದು?
* *ಗ್ಲುಮಟಿಕ್.*

27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ
ಯಾವುದು?
* *ಪೋಲಿಕ್.*

28) ಸಾರಜನಕ ಕಂಡು ಹಿಡಿದವರು ಯಾರು?
* *ರುದರ್ ಪೊರ್ಡ್.*

29) ಆಮ್ಲಜನಕ ಕಂಡು ಹಿಡಿದವರು ಯಾರು?
* *ಪ್ರಿಸ್ಟೆ.*

30) ಗಾಳಿಯ ಆರ್ದತೆ ಅಳೆಯಲು ----
ಬಳಸುತ್ತಾರೆ?
* *ಹೈಗ್ರೋಮೀಟರ್.*

31) ಹೈಗ್ರೋಮೀಟರ್ ಅನ್ನು ----- ಎಂದು
ಕರೆಯುತ್ತಾರೆ?
* *ಸೈಕೋಮೀಟರ್.*

32) ಯಾವುದರ ವಯಸ್ಸು ಪತ್ತೆಗೆ ಸಿ-14
ಪರೀಕ್ಷೆ ನಡೆಸುತ್ತಾರೆ?
* *ಪಳೆಯುಳಿಕೆಗಳ.*

33) ಕೋಬಾಲ್ಟ್ 60 ಯನ್ನು ಯಾವ
ಚಿಕಿತ್ಸೆಯಲ್ಲಿ ಬಳಸುತ್ತಾರೆ?
* *ಕ್ಯಾನ್ಸರ್.*

34) ಡುರಾಲು ಮಿನಿಯಂ ಲೋಹವನ್ನು
ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
* *ವಿಮಾನ.*

35) ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
* *ಬಿ & ಸಿ.*

36) ರಿಕೆಟ್ಸ್ ರೋಗ ಯಾರಲ್ಲಿ ಕಂಡು
ಬರುವುದು?
* *ಮಕ್ಕಳಲ್ಲಿ.*

37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು
ಬಾಗಿರುವ ಬಣ್ಣ ಯಾವುದು?
* *ನೇರಳೆ.*

38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ
ಬಣ್ಣ ಯಾವುದು?
* *ಕೆಂಪು.*

39) ಆಲೂಗಡ್ಡೆ ಯಾವುದರ
ರೂಪಾಂತರವಾಗಿದೆ?
* *ಬೇರು.*

40) ಮಾನವನ ದೇಹದ ಉದ್ದವಾದ ಮೂಳೆ
ಯಾವುದು?
* *ತೊಡೆಮೂಳೆ(ಫೀಮರ್).*

41) ವಯಸ್ಕರಲ್ಲಿ ಕೆಂಪು ರಕ್ತಕಣಗಳು
ಹುಟ್ಟುವ ಸ್ಥಳ ಯಾವುದು?
* *ಅಸ್ಥಿಮಜ್ಜೆ.*

42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ
ವಿಟಮಿನ್ ಯಾವು?
* *ಎ & ಡಿ.*

43) ರಿಕೆಟ್ಸ್ ರೋಗ ತಗುಲುವ ಅಂಗ
ಯಾವುದು?
* *ಮೂಳೆ.*

44) ವೈರಸ್ ಗಳು ----- ಯಿಂದ
ರೂಪಗೊಂಡಿರುತ್ತವೆ?
* *ಆರ್.ಎನ್.ಎ.*

45) ತಾಮ್ರ & ತವರದ ಮಿಶ್ರಣ ಯಾವುದು?
* *ಕಂಚು.*

46) ತಾಮ್ರ & ಸತುಗಳ ಮಿಶ್ರಣ ಯಾವುದು?
* *ಹಿತ್ತಾಳೆ.*

47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
* *ಬ್ಯೂಟೆನ್ & ಪ್ರೋಫೆನ್.*

48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
* *ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.*

49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ
ಬಳಸುವ ಅನಿಲ ಯಾವುದು?
* *ಜಲಜನಕ.*

50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ
ರಾಸಾಯನಿಕ ಯಾವುದು?
* *ಎಥಲಿನ್.*

51) ಆಳಸಾಗರದಲ್ಲಿ ಉಸಿರಾಟಕ್ಕೆ
ಆಮ್ಲಜನಕದೊಂದಿಗೆ ಬಳಸುವ ಅನಿಲ
ಯಾವುದು?
* *ಸಾರಜನಕ.*

52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ
ಯಾವುದು?
* *ಅಲ್ಯೂಮೀನಿಯಂ.*

53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ
ಯಾವುದು?
* *ಹೀಲಿಯಂ.*

54) ಪರಿಶುದ್ಧವಾದ ಕಬ್ಬಿಣ ಯಾವುದು?
* *ಮ್ಯಾಗ್ನಟೈಟ್.*

55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ
ಯಾವುದು?
* *ಕಾರ್ಬನ್ ಡೈ ಆಕ್ಸೈಡ್.*

56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ
ಯಾವುದು?
*ಕಾರ್ಬೋನಿಕ್ ಆಮ್ಲ.*

57) ಹಣ್ಣಿನ ರಸ ಸಂರಕ್ಷಿಸಲು ಬಳಸುವ
ರಾಸಾಯನಿಕ ಯಾವುದು?
*ಸೋಡಿಯಂ ಬೆಂಜೋಯಿಟ್.*

58) "ಆತ್ಮಹತ್ಯಾ ಚೀಲ"ಗಳೆಂದು ------
ಗಳನ್ನು ಕರೆಯುತ್ತಾರೆ?
* *ಲೈಸೋಜೋಮ್*

59) ವಿಟಮಿನ್ ಎ ಕೊರತೆಯಿಂದ ----
ಬರುತ್ತದೆ?
*ಇರುಳು ಕುರುಡುತನ*

60) ಐಯೋಡಿನ್ ಕೊರತೆಯಿಂದ ಬರುವ ರೋಗ
ಯಾವುದು?
*ಗಳಗಂಡ (ಗಾಯಿಟರ್)*